24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮಚ್ಚಿನ ಸ.ಪ್ರೌ. ಶಾಲೆಯಲ್ಲಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ

ಮಚ್ಚಿನ : ಪ್ರತಿಭೆಯೆಂಬುದು ಪರಿಶ್ರಮದ ಪ್ರತಿಫಲವೇ ಹೊರತು ಹಣತೆತ್ತು ಕೊಂಡುಕೊಳ್ಳುವ ವಸ್ತುವಲ್ಲ.
ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿಯು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ವಿರೂಪಾಕ್ಷಪ್ಪ ಎಚ್.ಎಸ್ ಹೇಳಿದರು.

ಅವರು ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ 2023-24 ನ್ನು ಉದ್ಘಾಟನೆ ಮಾಡಿ ಎಲ್ಲ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರಕಟಪಡಿಸಲು ಸೂಕ್ತ ವೇದಿಕೆ ಪ್ರತಿಭಾಕಾರಂಜಿಯಾಗಿದೆ .ಈ ನಿಟ್ಟಿನಲ್ಲಿ ಮಚ್ಚಿನ ಸರಕಾರಿ ಪ್ರೌಢಶಾಲೆಯು ಕಾರ್ಯಕ್ರಮವನ್ನು ಅತ್ಯುತ್ತಮ ರೀತಿಯಲ್ಲಿ ಸಂಯೋಜಿಸಿದ್ದು ,ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಸೊಬಗನ್ನು ನೀಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಪಾರೆಂಕಿ ದೇವಾಲಯದ ಪ್ರಧಾನ ಅರ್ಚಕರು ಹಾಗೂ ಮಡಂತ್ಯಾರು ರೋಟರಿ ಕ್ಲಬ್ ನ ಅಧ್ಯಕ್ಷ ಶ್ರೀಧರ್ ಭಟ್ ರವರು ಮನುಷ್ಯನ ಜೀವನದಲ್ಲಿ ದಾನಗುಣ ಅಮೂಲ್ಯವಾದದ್ದು, ನಾವು ಗಳಿಸಿದ್ದರಲ್ಲಿ ತನ್ನ ಜೀವನಕ್ಕೆ ಕಿಂಚಿತ್ತು ಇಟ್ಟುಕೊಂಡು, ಉಳಿದದ್ದನ್ನು ಸಮಾಜಕ್ಕೆ ಅರ್ಪಿಸಿದರೆ ನಮ್ಮ ಬದುಕಿಗೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಹೊನ್ನಪ್ಪ ಸಾಲಿಯಾನ್ ವಹಿಸಿದ್ದರು. ಎಸ್ ಡಿ ಎಂ ಸಿ ಶಿಕ್ಷಣದ ತಜ್ಞರಾದ ಡಾ. ಮಾಧವ ಶೆಟ್ಟಿ, ಸಿ .ಆರ್.ಪಿ ಶ್ರೀಮತಿ ಚೇತನ, ಬೆಳ್ತಂಗಡಿ ತಾಲೂಕಿನ ಶಿಕ್ಷಣ ಸಂಯೋಜಿಕೆಯಾಗಿರುವ ಶ್ರೀಮತಿ ಚೇತನಾಕ್ಷಿಯವರು ಪ್ರಾಸ್ತವಿಕ ಮಾತುಗಳನ್ನು ಆಡಿದರು.

ಮಚ್ಚಿನ ಪ್ರೌಢಶಾಲೆಯ ಮುಖ್ಯೋಪಾಧ್ಯರಾದ ಪ್ರಕಾಶ್ ಎಸ್ ನಾಯ್ಕ್ ರವರು ಸ್ವಾಗತಿಸಿ, ಸಮಾಜ ವಿಜ್ಞಾನ ಶಿಕ್ಷಕರಾದ ವೆಂಕಪ್ಪ ಬಿ ಧನ್ಯವಾದವಿತ್ತರು ಸಹ ಶಿಕ್ಷಕರಾದ ಚಂದಪ್ಪ ಪೂಜಾರಿಯವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು.

Related posts

ನಡ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ: ಕೆಸರ್ ಕoಡೊಡು ಗೌಡೆರೆ ಗೌಜಿ -ಗಮ್ಮತ್ ಕ್ರೀಡಾಕೂಟದಲ್ಲಿ ಮೊಗ್ರು ಗ್ರಾಮದ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಗೆ ಹಲವು ಪ್ರಶಸ್ತಿ

Suddi Udaya

ರೆಖ್ಯ: ಉರ್ನಡ್ಕ ನಿವಾಸಿ ಲೋಕೇಶ್ ನಾಪತ್ತೆ

Suddi Udaya

ಕರ್ನಾಟಕ ವಿಧಾನಸಭಾ ಚುನಾವಣೆ: ಕೊಕ್ರಾಡಿ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಪೂರ್ವಭಾವಿ ಸಭೆ

Suddi Udaya

ನಿಡಿಗಲ್-ಕಲ್ಮಂಜ ಗೆಳೆಯರ ಬಳಗದ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

Suddi Udaya
error: Content is protected !!