ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಮತ್ತು ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಗುರುಜಯಂತಿ ಹಾಗೂ ಸಮಾಜದ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಆ.31ರಂದು ಗುರುನಾರಾಯಣ ಸ್ವಾಮಿ ಸಭಾಭವನದಲ್ಲಿ ಜರುಗಿತು
ಶ್ರೀ ಗು.ನಾ.ಸ್ವಾ.ಸೇ. ಸಂಘದ ಗೌರವಾಧ್ಯಕ್ಷರು, ಮಾಜಿ ಶಾಸಕ ಕೆ. ವಸಂತ ಬಂಗೇರ ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು.
ಶ್ರೀ ಗು.ನಾ.ಸ್ವಾ.ಸೇ. ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್ ಪ್ರಧಾನ ಭಾಷಣ ಮಾಡಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಮಾಜಿ ಶಾಸಕರಾದ ಕೆ.ಪ್ರಭಾಕರ ಬಂಗೇರ, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿ,ಸಂಘದ ಉಪಾಧ್ಯಕ್ಷ ಶೇಖರ ಬಂಗೇರ ಹೇರಾಜೆ, ಪ್ರಧಾನ ಕಾರ್ಯದರ್ಶಿ ಜಯವಿಕ್ರಮ್ ಕಲ್ಲಾಪು,ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಜಿತ ವಿ ಬಂಗೇರ,ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಹೆಚ್, ಸಂಘದ ಜತೆ ಕಾರ್ಯದರ್ಶಿರಾಜೀವ ಸಾಲಿಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಕೋಶಾಧಿಕಾರಿ ಅಭಿನಂದನ್ ಹರೀಶ್ಚಕುಮಾರ್, ನಿರ್ದೇಶಕರುಗಳಾದ ಸೂರ್ಯನಾರಾಯಣ ಡಿ.ಕೆ, ದಿನೇಶ್ ಕೋಟ್ಯಾನ್, ಜಗದೀಶ್ ಡಿ,ಗೋಪಾಲ ಪೂಜಾರಿ ಮಚ್ಚಿನ,ಯಶೋಧರ ಪೂಜಾರಿ ವಲಸರಿ,ಶ್ರೀಮತಿ ಪ್ರೇಮ ಉಮೇಶ್,ಶ್ರೀಮತಿ ಪುಷ್ಪಾವತಿ ನಾವರ,ಲಕ್ಷ್ಮಣ ಪೂಜಾರಿ,ಪುನೀತ್ ಮಡಂತ್ಯಾರು, ರಂಜಿತ್ ಹೆಚ್.ಡಿ,ರಮೇಶ್ ಪೂಜಾರಿ ಪಡ್ಡಾಯಿಮಜಲು, ಸಂಪತ್ ಬಿ ಸುವರ್ಣ,ವಸಂತ ಪೂಜಾರಿ ಪುದುವೆಟ್ಟು,ಪುರುಷೋತ್ತಮ ಪೂಜಾರಿ,ಗುರುಪ್ರಸಾದ್ ಉಜಿರೆ, ಶ್ರೀಮತಿ ಯಶೋಧ ಕುತ್ಲೂರು,ಗಂಗಾಧರ ಪರಾರಿ,ಸುರೇಶ್ ಕೆ ಉಜಿರೆ, ಅರುಣೇಂದ್ರ, ಸಂಘದ ಮಾಜಿ ಅಧ್ಯಕ್ಷರುಗಳು,ನಿರ್ದೇಶಕರುಗಳು,ಇತರರು ಸಹಕರಿಸಿದರು.
ಸಾಧಕರಿಗೆ ಸನ್ಮಾನ:
ಸಮಾಜದ ಸಾಧಕರಾದ ಡಾ| ಬಿ.ಸಿ. ರಾಯ್ ರಾಜ್ಯ ಸರಕಾರದ ಪ್ರಶಸ್ತಿ ವಿಜೇತರಾದ ಡಾ| ಸದಾನಂದ ಪೂಜಾರಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್, ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರರಾದ ಸೂರಜ್ ಹೆಚ್.ಹಾನಿಂಜ, ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಕು| ನಿರೀಕ್ಷಾ ನಾವರ, ರಾಷ್ಟ್ರಮಟ್ಟದ ಡಿಸ್ಕಸ್ ಥ್ರೋ ಆಟಗಾರ್ತಿ ಕು| ಸುಷ್ಮಾ ಬಿ. ಪೂಜಾರಿ ಪರವಾಗಿ ತಾಯಿ ಮಾಲತಿ ಬಿ ಪೂಜಾರಿ ಇವರುಗಳನ್ನು ಸನ್ಮಾನಿಸಲಾಯಿತು.