April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸೆ.3ರಂದು ನಡೆಯುವ ಸಾರ್ವಜನಿಕ ಸಭೆಯಲ್ಲಿ ನ್ಯಾಯಾಲದ ಆದೇಶ ಉಲ್ಲಂಘಿಸದಂತೆ – ತಾಲೂಕಿನಲ್ಲಿ ಶಾಂತಿ ಸೌಹಾರ್ದತೆಗೆ ಭಂಗ ಬರದಂತೆ ಸೂಕ್ತ ಕ್ರಮ ಕೈಗೊಳ್ಳಲು- ಸಮಾನ ಮನಸ್ಕರಿಂದ ತಹಸೀಲ್ದಾರರಿಗೆ ಮನವಿ

ಬೆಳ್ತಂಗಡಿ: ಸೆ.3ರಂದು ಬೆಳ್ತಂಡಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಈಗಾಗಲೇ ನ್ಯಾಯಾಲಯಗಳು ಮಾಡಿರುವ ಆದೇಶವನ್ನು ಉಲ್ಲಂಘಿಸದಂತೆ ಹಾಗೂ ತಾಲೂಕಿನಲ್ಲಿ ಶಾಂತಿ ಸೌಹಾರ್ದತೆಗೆ ಭಂಗ ಬರದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕಿನ ಸಮಾನ ಮನಸ್ಕ ಶಾಂತಿಪ್ರಿಯ ನಾಗರಿಕರು ಸೆ.1ರಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಜೊತೆಗೆ ಕು| ಸೌಜನ್ಯಾಳ ಅಸಹಜ ಸಾವಿನ ಬಗ್ಗೆ ಅವರ ಕುಟುಂಬದ ಬೇಡಿಕೆಯಂತೆ ಹೆಚ್ಚುವರಿ ತನಿಖೆಯನ್ನು ನಡೆಸುವಂತೆ ಸಮಾಜ ಮನಸ್ಕರು ಮನವಿಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ. ಮನವಿಯನ್ನು ಉಜಿರೆ ಜನಾರ್ದನ ಸ್ವಾಮಿ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ತಹಸೀಲ್ದಾರರಿಗೆ ನೀಡಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಧನಂಜಯ ರಾವ್, ಉಜಿರೆ ಅಶೋಕ್ ಭಟ್, ಶಶಿಕಿರಣ್ ಜೈನ್, ಡಾ.ಎಮ್.ಎಮ್.ದಯಾಕರ್, ಇಚ್ಚಿಲ ಸುಂದರ ಗೌಡ, ಯೋಗೀಶ್ ಕುಮಾರ್ ನಡಕರ, ಅನಂತಕೃಷ್ಣ ಮಚ್ಚಿಮಲೆ, ಜಯಂತ ಶೆಟ್ಟಿ ಮಡಂತ್ಯಾರ್, ರಾಘವೇಂದ್ರ ಬೈಪಡಿತ್ತಾಯ ಹಾಗೂ ಬೆಳ್ತಂಗಡಿ, ಉಜಿರೆ ಪರಿಸರದ ಗಣ್ಯರು ಉಪಸ್ಥಿತರಿದ್ದರು.

Related posts

ಅರಸಿನಮಕ್ಕಿ ನವಶಕ್ತಿ ಆಟೋ ಚಾಲಕರ -ಮಾಲಕರ ಸಂಘ ಹಾಗೂ ದಾನಿಗಳ ಸಹಕಾರದಿಂದ ‘ನವಶಕ್ತಿ ಅಂಬ್ಯುಲೆನ್ಸ್’ ಲೋಕಾರ್ಪಣೆ

Suddi Udaya

ಧರ್ಮಸ್ಥಳದಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya

ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ನಿವೃತ್ತ ವೈದ್ಯಾಧಿಕಾರಿ ಡಾ| ಆದಂ ಉಸ್ಮಾನ್ ನಿಧನ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಗೆ ಇಂಗ್ಲೇಂಡಿನ ಟೀಮ್ ಮಲ್ಟಿ ಅಕಾಡೆಮಿ ಸಂಸ್ಥೆಯ ಸಿ.ಇ.ಒ ಭೇಟಿ

Suddi Udaya

ಕನ್ಯಾಡಿ ಶ್ರೀ ರಾಮ ಕ್ಷೇತ್ರಕ್ಕೆ ಮಾಜಿ ಸಚಿವ ನಾಗರಾಜ ಶೆಟ್ಟಿ ಭೇಟಿ

Suddi Udaya

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Suddi Udaya
error: Content is protected !!