September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುತ್ಲೂರು ಉನ್ನತೀಕರಿಸಿದ ಸರಕಾರಿ ಶಾಲೆಯ ತೋಟ ಲೋಕಾರ್ಪಣೆ: ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ ಅಗತ್ಯ-ಹರೇಕಳ ಹಾಜಬ್ಬ

ಕುತ್ಲೂರು : ಕುತ್ಲೂರು ಸರಕಾರಿ ಶಾಲೆ ಯ ಅಭಿವೃದ್ಧಿ ನೋಡಿ ಅತ್ಯಂತ ಹೆಚ್ಚು ಖುಷಿ ಪಟ್ಟಿರುವುದಾಗಿ ಪದ್ಮಶ್ರೀ ವಿಜೇತ ಹರೇಕಳ ಹಾಜಬ್ಬ ತಿಳಿಸಿದ್ದಾರೆ.

ಅವರು ಇಂದು ಬೆಳ್ತಂಗಡಿ ತಾಲೂಕಿನ ಕುತ್ಲೂರು ಉನ್ನತೀಕರಿಸಿದ ಸರಕಾರಿ ಶಾಲೆಯ ತೋಟವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡುತ್ತಿದ್ದರು. ಊರಿನ ಜನ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಿದಾಗ ಸಾಮೂಹಿಕ ಪ್ರಯತ್ನ ದಿಂದ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ.ನಾನು ಕಿತ್ತಳೆ ಹಣ್ಣು ಮಾರಾಟ ಮಾಡುತ್ತಿದ್ದ ವ್ಯಕ್ತಿ. ನನ್ನ ಊರಿಗೆ ಸರಕಾರಿ ಶಾಲೆ ಆಗಬೇಕೆಂಬ ಇಚ್ಛೆಯಿಂದ ಜನಪ್ರತಿನಿಧಿಗಳು, ಮಾಧ್ಯಮಗಳು ಸೇರಿದಂತೆ ಶಿಕ್ಷಣದ ಆಸಕ್ತಿ ಹೊಂದಿರುವ ಜನರ ಸಹಕಾರ ದಿಂದ ನನ್ನ ಆಸೆ ಈಡೇರಿದೆ.ಅದೇ ರೀತಿ ಕುತ್ಲೂರಿನಲ್ಲಿಯೂ ಎಲ್ಲ ಜನರ ಸಹಕಾರದಿಂದ ಶಾಲಾ ತೋಟ,ಸಂಸ್ಥೆ ಬೆಳೆದು ಬಂದಿರುವುದು ನೋಡಿದಾಗ ಅತ್ಯಂತ ಹೆಚ್ಚು ಸಂತೋಷವಾಯಿತು ಎಂದು ಹಾಜಬ್ಬ ವಿವರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ರಾಜ ವರ್ಮ ಜೈನ್ ನಾರಾವಿ ಅಧ್ಯಕ್ಷ ತೆ ವಹಿಸಿದ್ದರು.ಧರ್ಮ ಸ್ಥಳ ಧರ್ಮೋತ್ಥಾನ ಟ್ರಸ್ಟ್ ನ ಕಾರ್ಯದರ್ಶಿ ವೀರು ಶೆಟ್ಟಿ ಧಮ೯ಸ್ದಳ , ದ.ಕ ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಾಯಕ ಯೋಜನಾಧಿಕಾರಿ ಆನಂದ ಸುವರ್ಣ, ಜೀವಂಧರ ಕುಮಾರ್, ಸತೀಶ್ ಪಡಿವಾಳ್, ಕೃಷ್ಣ ಪ್ಪ ಪೂಜಾರಿ ,ಕ್ಷೇತ್ರ ಶಿಕ್ಷಣಾಧಿಕಾರಿ‌ ತಾರಕೇಸರಿ,ಮುಖ್ಯೋಪಾಧ್ಯಾಯರಾದ ರೂಪ ಕುಮಾರಿ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿ ಕಾರಿ ಪುಷ್ಪ ರಾಜ್ ಬಿ.ಎನ್,ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ,ಪತ್ರಕರ್ತ ಧನಕೀರ್ತಿ ಅರಿಗ, ಎಸ್ ಡಿಎಂಸಿ ಉಪಾಧ್ಯಕ್ಷ ಜ್ಯೋತಿ ಸುವರ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಮಿತ್ ಜೈನ್, ಉಪಸ್ಥಿತರಿದ್ದರು.

ಎಸ್ ಡಿಎಂ ಸಿ ಅಧ್ಯಕ್ಷ ರಾಮಚಂದ್ರ ಭಟ್ ಸ್ವಾಗತಿಸಿದರು.ಸತೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನಿತಾ ವಂದಿಸಿದರು.ಇದೇ ಸಂದರ್ಭದಲ್ಲಿ ಶಾಲಾ ವಾರ್ಷಿಕೊತ್ಸವ ಸಮಾರಂಭದಲ್ಲಿ ಸ್ವಧಾ೯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Related posts

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಎಲ್.ಸಿ. ಆರ್. ಇಂಡಿಯನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಅಮೋಘ ಸಾಧನೆ.

Suddi Udaya

ಬೆಳ್ತಂಗಡಿ ತಾಲೂಕು ರಾಮ ಕ್ಷತ್ರಿಯ ಸಂಘದ 22ನೇ ವಾರ್ಷಿಕೋತ್ಸವ – ರಾಮಕ್ಷತ್ರಿಯ ಮಹಿಳಾ ವೃಂದದ ಉದ್ಘಾಟನೆ – ರಾಮಕ್ಷತ್ರಿಯ ಯುವ ವೇದಿಕೆಯ ಉದ್ಘಾಟನೆ – ಸಂಭ್ರಮದ “ಕ್ಷತ್ರಿಯ ಸಂಗಮ” ಸಾಧಕರಿಗೆ ಸನ್ಮಾನ, ಹಿರಿಯರಿಗೆ ಗೌರವಾರ್ಪಣೆ

Suddi Udaya

ಅಳದಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘದ 18ನೇ ವರ್ಷದ ವಾರ್ಷಿಕೋತ್ಸವ-ವಿಶ್ವಕರ್ಮ ಪೂಜೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಪದ್ಮಂಜ ಸಹಕಾರಿ ಸಂಘದ ರೈತ ಸಭಾಭವನ ಮತ್ತು ರೈತ ಗೋದಾಮು ಕಟ್ಟಡ ಉದ್ಘಾಟನೆ

Suddi Udaya
error: Content is protected !!