ಬೆಳ್ತಂಗಡಿ: ಸರಕಾರಿ ಪ್ರೌಢ ಶಾಲೆ ಕೊಯ್ಯೂರು ನಲ್ಲಿ ಆ.31 ರಂದು ನಡೆದ ಬೆಳ್ತಂಗಡಿ – ಬಂಗಾಡಿ- ಅಣಿಯೂರು- ಮುಂಡಾಜೆ ವಲಯ ಮಟ್ಟದ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಭಾಗವಹಿಸಿದ ಪ್ರೌಢ ಶಾಲೆಗಳಲ್ಲಿ ಅತೀ ಹೆಚ್ಚಿನ ಪ್ರಶಸ್ತಿಯೊಂದಿಗೆ ರನ್ನರ್‍ಸ್ ಚಾಂಪಿಯನ್ ಪಡೆದುಕೊಂಡು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.
ಕನ್ನಡ ಭಾಷಣ -ಪ್ರಾಪ್ತಿ (ಪ್ರಥಮ), ತುಳು ಭಾಷಣ – ದೀಪ್ತ ( ಪ್ರಥಮ), ಭರತನಾಟ್ಯ – ನವಮಿ. ಎಂ ( ಪ್ರಥಮ),
ರಂಗೋಲಿ – ಶೃತಿ ( ದ್ವಿತೀಯ), ಜಾನಪದ ನೃತ್ಯ ತಂಡ- ಸಿ. ಎಸ್ ಕಲ್ಪನಾ ಕಾವೇರಮ್ಮ, ವಂಶಿಕಾ, ತೃಷಾ, ನಿರೀಕ್ಷಾ ವಿ ಗೌಡ, ಅದ್ವಿತಾ, ದೀಪ್ತಿ,( ದ್ವಿತೀಯ), ಕವ್ವಾಲಿ ತಂಡ – ಫಾತಿಮತ್ ಹಫಿಜಾ, ಸ್ಪರ್ಶಾ, ಆಕರ್ಶ, ಅಬ್ದುಲ್ ಶಾಹಿದ್,
ಭೂಮಿಕ. ಆರ್. ಎಸ್, ಸಹಾನ್( ದ್ವಿತೀಯ), ಹಿಂದಿ ಭಾಷಣ ಕುಶಾನ್. ಪಿ ( ತೃತೀಯ), ಇಂಗ್ಲೀಷ್ ಭಾಷಣ ಅಭಿಜ್ಞಾ. ಶೆಟ್ಟಿ (ತೃತೀಯ) ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.