29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ಶಿಬಾಜೆ: ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚೌತಿ- ನವರಾತ್ರಿಯ ಬಗ್ಗೆ ಪೂರ್ವಭಾವಿ ಸಭೆ

ಶಿಬಾಜೆ: ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವವನ್ನು ಅಚ್ಚುಕಟ್ಟಾಗಿ ಆಚರಿಸುವ ಕುರಿತು ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಇತರ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಪೂರ್ವಭಾವಿ ಸಭೆ ನಡೆಸಿದರು.

ಈ ಸಭೆಯಲ್ಲಿ ನವರಾತ್ರಿ ಆಚರಣೆ ಹೊರತಾಗಿ ದೇವಸ್ಥಾನದ ಖರ್ಚು ವೆಚ್ಚಗಳ ಬಗ್ಗೆ ಚೌತಿಯ ವ್ಯವಸ್ಥೆಯ ಬಗ್ಗೆ ನೂತನವಾಗಿ ನಿರ್ಮಿಸಲ್ಪಡುವ ಸಮುದಾಯ ಭವನದ ಕಾಮಗಾರಿಯ ಬಗ್ಗೆ ಹಾಗೂ ದೇವಳದ ಜಮೀನಿನ ಕೃಷಿ ಕಾರ್ಯಗಳ ಬಗ್ಗೆ ಮಾತುಕತೆ ನಡೆಸಿದರು.

ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯಕ್, ಕೃಷ್ಣಪ್ಪಗೌಡ ಬೆಂಗಳ, ಈಶ್ವರ ಶೆಟ್ಟಿಗಾರ್ ಬರಮೇಲು, ನಾರಾಯಣಗೌಡ ಪಡಂತಾಜೆ, ಸತೀಶ್ ಎಂ ಕೆ ಪತ್ತಿಮಾರು, ಶಾರದಾ ಪ್ರಕಾಶ್ ರಾವ್ ಅಜಿರಡ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಿವಾಕರ ಹೆಬ್ಬಾರ್, ಉಪಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.ಸ್ವಾಗತವನ್ನು ದೇವಳದ ಸಿಬ್ಬಂದಿಯಾದ ಶಕುಂತಲಾ ಮತ್ತು ಧನ್ಯವಾದ ಕೃಷ್ಣಪ್ಪ ಗೌಡ ಬೆಂಗಳ ನೆರವೇರಿಸಿದರು

Related posts

“ನಮ್ಮ ಜವನೆರ್ ವಾಟ್ಸಪ್ ಗ್ರೂಪ್ ಅಳದಂಗಡಿ” ಹಾಗೂ “ಪಬ್ ಜಿ “ಗ್ರೂಪಿನ ಸದಸ್ಯರಿಂದ ಸಹಾಯಧನ ಹಸ್ತಾಂತರ

Suddi Udaya

ವೇಣೂರು ಸರಕಾರಿ ಪ್ರೌಢ ಶಾಲೆಯಲ್ಲಿ “ಸ್ವಾಸ್ಥ್ಯ ಸಂಕಲ್ಪ “ಕಾರ್ಯಕ್ರಮ

Suddi Udaya

ಉಜಿರೆ: ಎಸ್. ಡಿ. ಎಂ ಆಂ.ಮಾ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ “ನ್ಯೂ ಏಜ್ ಕೆರಿಯರ್ ಆಪರ್ಚುನಿಟಿಸ್” ವಿಷಯದ ಮೇಲೆ ಉಪನ್ಯಾಸ

Suddi Udaya

ಸೋಣಂದೂರು: ಜಿಲ್ಲಾ ಮಟ್ಟದ ಪುರುಷರ 55 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ

Suddi Udaya

ಪಟ್ರಮೆ: ಮಿತ್ತಡ್ಕದಲ್ಲಿ ಸಂಜೀವ ಗೌಡ ರವರ ಮನೆಗೆ ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿ: ಅಪಾರ ಹಾನಿ

Suddi Udaya
error: Content is protected !!