37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಸಾಧಕರು

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ: ಮುಂಡೂರು ಶಾಲೆಯ ಮುಖ್ಯ ಶಿಕ್ಷಕ ಕಲ್ಲೇಶಪ್ಪ ಕೆ.ಬಿ. ಆಯ್ಕೆ

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ಮುಂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕಲ್ಲೇಶಪ್ಪ ಕೆ.ಬಿ.ಈ ಬಾರಿಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಯಚೂರಿನ ಮಾನವಿಯ ಹರನಹಳ್ಳಿ ಸ.ಕಿ.ಪ್ರಾ ಶಾಲೆಗೆ 2002 ರಲ್ಲಿ ಶಿಕ್ಷಕರಾಗಿ ನೇಮಕಗೊಂಡು 2004ರಲ್ಲಿ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಸಿದ್ದಬೈಲು ಪರಾರಿ ಶಾಲೆಗೆ ವರ್ಗಾವಣೆಗೊಂಡರು. 2013ರಿಂದ ಮುಂಡಾಜೆ ಕ್ಲಸ್ಟರ್ ನ ಸಿಆರ್ ಪಿ ಯಾಗಿ ಸೇವೆ ಸಲ್ಲಿಸಿ, 2017ರಿಂದ ಮುಂಡೂರು ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ 21 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಲ್ಲೇಲಿಂಗನಹಳ್ಳಿ ಹಾಲಮ್ಮ ಹಾಗೂ ಬಸಪ್ಪ ದಂಪತಿಯ ಪುತ್ರ.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸಿಂಗಟಗೆರೆಯಲ್ಲಿ ಟಿಸಿಎಚ್ ತರಬೇತಿಯನ್ನು ಬೆಂಗಳೂರಿನಲ್ಲಿ ಪದವಿಯನ್ನು ಮೈಸೂರಲ್ಲಿ ಪೂರೈಸಿ, ದೆಹಲಿಯ ಐಜಿಎನ್ ಒಯು ನಿಂದ ಬಿ.ಎಡ್ ತರಬೇತಿ ಪಡೆದಿದ್ದಾರೆ.

ಸಿಆರ್‌ ಪಿ ಯಾಗಿ ಕರ್ತವ್ಯ ನಿರ್ವಹಿಸುವ ವೇಳೆ ಶಿಕ್ಷಕರಿಗೆ ಅನೇಕ ತರಬೇತಿಗಳನ್ನು ನೀಡಿ ದ್ದಾರೆ.ಮುಂಡೂರು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು ಶಾಲೆ ಕೊಠಡಿಗಳು ಸುಣ್ಣಬಣ್ಣ ಕಾಣದೆ ಹಲವು ವರ್ಷಗಳಾಗಿತ್ತು. ಇವರು ಪ್ರಭಾರ ಮುಖ್ಯ ಶಿಕ್ಷಕರಾಗಿ ನೇಮಕಗೊಂಡ ಬಳಿಕ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿದ್ದು ಶಾಲೆಗೆ ಅನೇಕ ಮೂಲಭೂತ ಸೌಕರ್ಯಗಳು ದೊರಕಿವೆ.

ಇವರ ಪತ್ನಿ ಸುಧಾ ಕೂಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related posts

ಸಾವ್ಯ: ಶುಭೋದಯ ಯುವಕ ಮಂಡಲದಿಂದ ಸಾಮೂಹಿಕ ಶ್ರೀ ಶನೈಶ್ವರ ಪೂಜೆ

Suddi Udaya

ಬೆಳ್ತಂಗಡಿ ಸರ್ಕಲ್ ಇನ್ಸ್‌ ಪೆಕ್ಟರ್ ಆಗಿ ನಾಗೇಶ್ ಕದ್ರಿ ಮರು ನೇಮಕ

Suddi Udaya

ಬೆಳಾಲು ಗೌಡರ ಯಾನೆ ಒಕ್ಕಲಿಗರ ವಾರ್ಷಿಕೋತ್ಸವ

Suddi Udaya

ಬೆಳ್ತಂಗಡಿ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದಿಂದ 354 ನೇ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

Suddi Udaya

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಚರ್ಚ್ ಶಾಲೆಯ ವಿದ್ಯಾರ್ಥಿ ಪ್ರೇಕ್ಷಿತ್ ತೃತೀಯ ಸ್ಥಾನ

Suddi Udaya

ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಸಂಘಟನೆಯಿಂದ ಮೊಸರು ಕುಡಿಕೆ ಉತ್ಸವ: ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ, ಮುದ್ದುಕೃಷ್ಣ ಸ್ಪರ್ದೆ,ವಿವಿಧ ಮನೋರಂಜನಾ ಕಾರ್ಯಕ್ರಮ

Suddi Udaya
error: Content is protected !!