25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅರಸಿನಮಕ್ಕಿ: “ಶ್ರೀನಿಧಿ ಜನಸೇವಾ ಕೇಂದ್ರ”ದಲ್ಲಿ ಬ್ಯಾಂಕ್ ಆಫ್ ಬರೋಡಾದ ವ್ಯವಹಾರ ಸೌಲಭ್ಯ ಉದ್ಘಾಟನೆ

ಅರಸಿನಮಕ್ಕಿ: ಅರಸಿನಮಕ್ಕಿಯ ಶುಭರಾಮ್ ಕಾಂಪ್ಲೆಕ್ಸ್ ನಲ್ಲಿರುವ “ಶ್ರೀನಿಧಿ ಜನಸೇವಾ ಕೇಂದ್ರ”ದಲ್ಲಿ ಬ್ಯಾಂಕ್ ಆಫ್ ಬರೋಡಾದ ವ್ಯವಹಾರ ಸೌಲಭ್ಯ ಉದ್ಘಾಟನೆಯು ಸೆ.4 ರಂದು ನಡೆಯಿತು.

ಉದ್ಘಾಟನೆಯನ್ನು ಅರಸಿನಮಕ್ಕಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಹಾಗೂ ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್. ನೆರವೇರಿಸಿದರು.

ಈ ಸಂದರ್ಭದಲ್ಲಿ ಶಿಶಿಲ ಬ್ಯಾಂಕ್ ಆಫ್ ಬರೋಡದ ಉದ್ಯೋಗಿ ಶ್ರೀಮತಿ ನಿಧಿ, ಶಿಶಿಲ ಗ್ರಾ.ಪಂ. ಅಧ್ಯಕ್ಷ ಸುಧೀನ್, ಶಿಬಾಜೆ ಗ್ರಾ.ಪಂ. ಸದಸ್ಯೆ ವನಿತಾ, ಹತ್ಯಡ್ಕ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ಕೆ. ಸಾಲ್ಯಾನ್, ನಿರ್ದೇಶಕ ಮುರುಳೀಧರ್ ಶೆಟ್ಟಿಗಾರ್, ಅರಸಿನಮಕ್ಕಿ ಗ್ರಾ.ಪಂ. ಸದಸ್ಯ ಪ್ರೇಮಚಂದ್ರ ಉಪಸ್ಥಿತರಿದರು.


ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಮಿತ್ರನಾಗಿ “ಶ್ರೀನಿಧಿ ಜನಸೇವಾ ಕೇಂದ್ರ” ದಲ್ಲಿ ಕಾರ್ಯಾರಂಭಿಸಲಿದ್ದು ಇದರಿಂದಾಗಿ ಇನ್ನು ಮುಂದೆ 5 ಗ್ರಾಮಗಳ ಜನರು ಸದ್ರಿ ಬ್ಯಾಂಕ್ ನ ವ್ಯವಹಾರವನ್ನು ಮಾಡಬಹುದಾಗಿದೆ.

ಬಂದಂತಹ ಅತಿಥಿ ಗಣ್ಯರನ್ನು ಶ್ರೀನಿಧಿ ಜನಸೇವಾ ಕೇಂದ್ರದ ಗಣೇಶ್ ಹೊಸ್ತೋಟ, ಹಾಗೂ ಧನ್ಯ ಸತ್ಕರಿಸಿದರು.


Related posts

ಕನ್ಯಾಡಿ II, ದ. ಕ. ಜಿ. ಪ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಬೆಳ್ತಂಗಡಿ: ರೈತರು ಫ್ರುಟ್ಸ್ ಐ.ಡಿ. ಮಾಡಿಸಿಕೊಳ್ಳುವಂತೆ ತಹಶೀಲ್ದಾರ್ ಪೃಥ್ವಿ ಸಾನಿಕಂ ಮನವಿ

Suddi Udaya

ಗ್ರಾಮೀಣ ಸರಕಾರಿ ಪ್ರೌಢಶಾಲೆಯಲ್ಲಿ ಹೀಗೊಂದು ವಿನೂತನ ಶೌಚಾಲಯ

Suddi Udaya

ಮಲ್ ಜಅ ದಅವಾ ಕೇಂದ್ರದಿಂದ ಒಂದು ಸಾವಿರ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Suddi Udaya

ಪೆರಿಂಜೆ : ಮಿಲಾದ್ ಆಚರಣೆಯ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳಿಂದ ‘ನೂರುನ್ ಆಲಾ ನೂರ್ ‘ಕಾರ್ಯಕ್ರಮ

Suddi Udaya

ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

Suddi Udaya
error: Content is protected !!