September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಾಲಾಡಿ ನಿವಾಸಿ ಅನಿಲ್ ಪ್ರವೀಣ ಪಿರೇರಾ ನಾಪತ್ತೆ: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಾಲಾಡಿ: ತರಬೇತಿಯ ಮಕ್ಕಳನ್ನು ಎಕ್ಸಾಮ್ ಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದ ವ್ಯಕ್ತಿ ವಾಪಾಸ್ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪದಬೈಲು ನಿವಾಸಿ ಅನಿಲ್ ಪ್ರವೀಣ ಪಿರೇರಾ ನಾಪತ್ತೆಯಾದ ಯುವಕ.

ಅನಿಲ್ ಪ್ರವೀಣ ಪಿರೇರಾ ಅವರು ವಿನ್ ನ್ಯಾಷನಲ್ ಸ್ಟೇಲ್ ಬಿ ತರಬೇತಿಯ regional coordinator ಆಗಿ ಕೆಲಸ ನಿರ್ವಹಿಸುತ್ತಿದ್ದು, ಸೆ.02 ರಂದು ಸಂಜೆ 8.30 ಕ್ಕೆ ವಿನ್ ನ್ಯಾಷನಲ್ ಸ್ಟೇಲ್ ಬಿ ತರಬೇತಿಯ 5 ಜನ ಮಕ್ಕಳನ್ನು ಬೆಂಗಳೂರಿನಲ್ಲಿ ನಡೆಯುವ ಎಕ್ಸಾಮ್ ಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ತೆರಳಿದ್ದಾರೆ. ಬಳಿಕ ಸೆ.3 ರಂದು ರಾತ್ರಿ 8.45 ಕ್ಕೆ ಕರೆ ಮಾಡಿ ವಿಚಾರಿಸಿದಾಗ ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ಬಸ್ ಇದ್ದು, ಇನ್ನು ಹೊರಡಬೇಕಷ್ಟೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಆದ್ರೆ ಸೆ.4ರಂದು ಬೆಳಿಗ್ಗೆ 5ಗಂಟೆಗೆ ಎಕ್ಸಾಮ್ ಗೆ ಹೋಗಿದ್ದ ಮಕ್ಕಳನ್ನು ಕರೆದುಕೊಂಡು ಬರಲು ಬಿಸಿರೋಡ್ ಗೆ ಹೋದ ಅನಿಲ್ ಡೇಸಾ ಎಂಬವವರನ್ನು ಸಂಪರ್ಕಿದಾಗ ಅನಿಲ್ ಅವರು ಬೆಳಿಗ್ಗೆ 5ಗಂಟೆಗೆ ಬಿಸಿರೋಡ್ ಗೆ ತಲುಪಿ ತರಬೇತಿಗೆ ತೆರಳಿದ ಮಕ್ಕಳನ್ನು ಬಿಸಿರೋಡ್ ನಲ್ಲಿ ಇಳಿಸಿ ಬಳಿಕ ಮಂಗಳೂರಿನಲ್ಲಿ ಕೆಲಸ ಮುಗಿಸಿಕೊಂಡು ಬರುವುದಾಗಿ ಹೇಳಿ ತೆರಳಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಅನಿಲ್ ಅವರಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಬಳಿಕ ಸಂಜೆಯಾದರೂ ಮನೆಗೆ ಮರಳಿ ಬಾರದೆ ಇರುವುದನ್ನು ಕಂಡು ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗ ಅನಿಲ್ ಅವರು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಧ್ಯ ಪತ್ನಿ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಿಲ್ ಪ್ರವೀಣ ಪಿರೇರಾ ಅವರ ಪತ್ತೆಗೆ ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ

Related posts

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ಪೋಷಕರ ಸಭೆ

Suddi Udaya

ಒಂದು ವರ್ಷದಿಂದ ನಾಪತ್ತೆಯಾಗಿದ್ದ ಗೇರುಕಟ್ಟೆಯ ಸತೀಶ್ ರವರು ಮಂಗಳೂರಿನ ಲಾಡ್ಜಿನಲ್ಲಿ ಆತ್ಮಹತ್ಯೆ

Suddi Udaya

ರೀಜೆಂಟ್ ಮಳಿಗೆ ಅಳದಂಗಡಿಯಿಂದ- ಗರ್ಡಾಡಿ ಹೊನ್ನಕಟ್ಟೆಗೆ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಕುತ್ಲೂರು ಸರಕಾರಿ ಉನ್ನತೀಕರಿಸಿದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ನೆರಿಯದಲ್ಲಿ ಅಟಲ್ ವಿರಾಸತ್ ಜನ್ಮ ಶತಾಬ್ದಿ ಪ್ರಯುಕ್ತ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರಿಂದ ಕಿಟ್ ವಿತರಣೆ

Suddi Udaya

ಬೆಳ್ತಂಗಡಿ 9/11 ಸಮಸ್ಯೆಗಳ ಬಗ್ಗೆ ಮತ್ತು ತಾಲೂಕಿಗೆ ಪ್ರತ್ಯೇಕ ಯೋಜನಾ ಪ್ರಾಧಿಕಾರವನ್ನು ರಚನೆ ಮಾಡುವಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದ ನಿರ್ದೇಶಕರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya
error: Content is protected !!