September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಸೆ.7: ಬರೆಂಗಾಯ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ

ನಿಡ್ಲೆ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಬರೆಂಗಾಯ ಹಾಗೂ ನಿಸರ್ಗ ಯುವಜನೇತರ ಮಂಡಲ ಬರೆಂಗಾಯ ನಿಡ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಮೊಸರು ಕುಡಿಕೆ ಉತ್ಸವವು ಸೆ.7 ರಂದು ಉ.ದ.ಕ.ಜಿ.ಪ.ಹಿ.ಪ್ರಾ. ಶಾಲೆ ಬರೆಂಗಾಯದಲ್ಲಿ ಜರುಗಲಿದೆ.

ಬರೆಂಗಾಯ ಭಟಾರಿ ಯಾನೆ ಮಲೆದೇವತೆ ದೈವಸ್ಥಾನ ಕೊಡಂಗೆ ಇದರ ಆಡಳಿತ ಟ್ರಸ್ಟ್ ಅಧ್ಯಕ್ಷ ಹೆಚ್ ವಿಶ್ವನಾಥ ರಾವ್ ಹಿರ್ತಡ್ಕ ಉದ್ಘಾಟಿಸಲಿದ್ದಾರೆ.ಅಧ್ಯಕ್ಷತೆಯನ್ನು ಬರೆಂಗಾಯ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರುಕ್ಮಯ್ಯ ಪೂಜಾರಿ ಪೋರ್ಕಳ ವಹಿಸಲಿರುವರು, ಶ್ರೀ ನಾರಾಯಣಗುರು ಕಾಲೇಜು ಕುದ್ರೋಳಿ ಇದರ ಉಪನ್ಯಾಸಕರಾದ ಕೇಶವ ಬಂಗೇರ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಕೊಕ್ಕಡ ಉಪವಲಯ ಅರಣ್ಯಧಿಕಾರಿ ಕೆ.ಆರ್ ಅಶೋಕ್, ನಿಡ್ಲೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶ್ಯಾಮಲ, ಬರೆಂಗಾಯ ಶಾಲಾ ಮುಖ್ಯ ಶಿಕ್ಷಕ ಗೋಪಾಲ್ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಿಯಾರು ಶಾಲಾ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕು.ವಸಂತಿ ಟಿ, ಕೊಕ್ಕಡ ಉಪವಲಯ ಅರಣ್ಯಾಧಿಕಾರಿ ಕೆ.ಆರ್ ಅಶೋಕ್, ಕೊಕ್ಕಡ ಫ್ರೌಢ ಶಾಲಾ ಶಿಕ್ಷಕ ದಯಾನಂದ ಪಿ.ಡಿರವರನ್ನು ಸನ್ಮಾನಿಸಲಾಗುವುದು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದ.ಕ ಜಿಲ್ಲೆಯ ಸುಪ್ರಸಿದ್ದ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ಡಿ ಮನೋಹರ್ ಕುಮಾರ್ ವಿರಚಿತ ಮತ್ತು ಅಶೋಕ್ ಶೆಟ್ಟಿ ಸರಪಾಡಿ ಇವರ ಸಂಯೋಜನೆಯಲ್ಲಿ ಯಕ್ಷಗಾನ ಗೆಜ್ಜೆದ ಪೂಜೆ ಜರುಗಲಿದೆ.

Related posts

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನೆ

Suddi Udaya

ಅರಸಿನಮಕ್ಕಿ ಸ.ಪ್ರೌ. ಶಾಲೆ ಹಾಗೂ ಗ್ರಾಮ ಪಂಚಾಯತ್ ನ ಅರಿವು ಕೇಂದ್ರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ

Suddi Udaya

ಅಕ್ರಮ ಜೂಜಾಟದ ಮೇಲೆ ವೇಣೂರು ಪೊಲೀಸರ ದಾಳಿ: 17 ಮಂದಿ ಆರೋಪಿಗಳ ಬಂಧನ

Suddi Udaya

ಉಪ್ಪಿನಂಗಡಿ – ಮಡಂತ್ಯಾರು ಮಾರ್ಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಬಿಡುವಂತೆ ಆಗ್ರಹಿಸಿ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಎಸ್‌ಡಿಪಿಐ ನಿಯೋಗ

Suddi Udaya

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಗೆ ಅಬ್ಬೋನು ಮದ್ದಡ್ಕ ನೇಮಕ

Suddi Udaya

ಅಳದಂಗಡಿಯಲ್ಲಿ ತೃಷಾ ಮೆಡಿಕಲ್ ಶುಭಾರಂಭ

Suddi Udaya
error: Content is protected !!