30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದನ್ವಯ ಸ್ವ ಉದ್ಯೋಗ ಪ್ರೇರಣಾ ಶಿಬಿರ

ವೇಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ), ಗುರುವಾಯನಕೆರೆ, ವೇಣೂರು ವಲಯದ ಕರಿಮಣೇಲು ಕಾರ್ಯಕ್ಷೇತ್ರ ದ ಪಡ್ಡಂತಡ್ಕ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದನ್ವಯ ಸ್ವ ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮದ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷರಾದ ದೋಗೂ ನಾಯ್ಕರವರು ನೆರವೇರಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಸಿದ್ದವನ ಉಜಿರೆಯ ರುಡ್ ಸೆಟ್ ಸಂಸ್ಥೆಯ ಸಿಬ್ಬಂದಿ ರಶ್ಮಿ ರವರು ಮಾತನಾಡಿ ರುಡ್ ಸೆಟ್ ಸಂಸ್ಥೆ ಬೆಳೆದು ಬಂದ ಬಗ್ಗೆ ಇಲ್ಲಿ ನೀಡುವ ತರಭೇತಿಗಳು, ತರಬೇತಿ ಯ ನಂತರ ಫಲಾನುಭವಿಗಳು ಸ್ವ ಉದ್ಯೋಗ ಮಾಡಲು ಪ್ರೇರಣೆ, ಬ್ಯಾಂಕ್ ನಲ್ಲಿ ಸಬ್ಸಿಡಿ ಯಲ್ಲಿ ಸಿಗುವ ಸಾಲಗಳ ಬಗ್ಗೆ ಮಾಹಿತಿ ನೀಡಲಾಗುತಿದೆ. ತರಭೇತಿ ಪಡೆಯುವುದು ಮುಖ್ಯವಲ್ಲ ನಂತರ ದಿನಗಳಲ್ಲಿ ಕಲಿತ ವಿದ್ಯೆ ಯಲ್ಲಿ ಸ್ವ ಉದ್ಯೋಗ ಮಾಡುವುದು ಮುಖ್ಯ ವಾಗಿರುತ್ತದೆ ಇದರ ಬಗ್ಗೆ ನಾವು ತರಭೇತಿಯ ಬಳಿಕವು ಪಲಾನುಭಾವಿಯ ಸಂಪರ್ಕದಲ್ಲಿ ಇರುತ್ತೇವೆ. ಯಾಕೆಂದ್ರೆ ಎಲ್ಲರಿಗೂ ಸರಕಾರಿ, ಹಾಗೂ ಖಾಸಗಿ ಉದ್ಯೋಗ ಸಿಗಲು ಸಾಧ್ಯವಿಲ್ಲ ಅದರಿಂದ ಸ್ವ ಉದ್ಯೋಗ ಮಾಡಬೇಕಾದ ಅನಿವಾರ್ಯತೆ ಇದೇ ಎಂದರು. ನಮ್ಮ ತರಬೇತಿ ಸಂಸ್ಥೆಯಲ್ಲಿ ಕೃಷಿ ಸಂಬ0ಧಿತ, ಉತ್ಪನ ಸಂಬಂಧಿತ, ಉದ್ಯಮಶೀಲತಾ ತರಭೇತಿ , ಸೇವೆಗೆ ಸಂಬಂಧಿಸಿದಂತೆ ಸೆಲ್ ಫೋನ್ ರಿಪೇರಿ, ಸಿ. ಸಿ ಟಿವಿ, ಕಂಪ್ಯೂಟರ್, ಗ್ರಹೋಪಯೋಗಿ ಉಪಕರಣಗಳ ರಿಪೇರಿ, ಹಾಗೂ ಇನ್ನಿತರ ತರಭೇತಿಗಳನ್ನು ನೀಡಲಾಗುವುದು ಕಲಿಯಲು ಆಸಕ್ತಿ ಇರುವವರು ಇ-ಮೆಲ್,ವೆಬ್ ಸೈಟ್, ದೂರವಾಣಿ ಮುಖಂತರವು ಅರ್ಜಿ ನೀಡಬಹುದು ಎಂದರು.

ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಧಿಕಾರಿ ಹರಿಣಿ, ಸೇವಾಪ್ರತಿನಿಧಿ ಶೋಭಾ, ಒಕ್ಕೂಟ ಪದಾಧಿಕಾರಿಗಳಾದ ಗಣೇಶ್, ಆನಂದ, ಯಶೋಧ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಯನ್ನು ಶ್ವೇತಾರವರು ನೆರವೇರಿಸಿದರು.

Related posts

ಶ್ರೀರಾಮ ಶಿಶು ಮಂದಿರದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

Suddi Udaya

ಬೆಳ್ತಂಗಡಿ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಜನಾ ಪುಸ್ತಕ ಬಿಡುಗಡೆ

Suddi Udaya

ಉಜಿರೆ: ಅಂತರ್ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಗೌಡಸ್ 2024

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ಆಯುಧ ಪೂಜೆ

Suddi Udaya

ವಾತ್ಸಲ್ಯ ಮನೆ ನಿರ್ಮಾಣದ ಮೂಲಕ ಬೆಜಕ್ರೆರವರ ಬದುಕಿಗೆ ಬೆಳಕಾದ ಗ್ರಾಮಾಭಿವೃದ್ಧಿ ಯೋಜನೆ

Suddi Udaya

ಧರ್ಮಸ್ಥಳ: ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಹಮಿಲನ ಮತ್ತು ವ್ಯಸನಮುಕ್ತರ ಕುಟುಂಬೋತ್ಸವ ಕಾರ್ಯಕ್ರಮ

Suddi Udaya
error: Content is protected !!