ಶ್ರೀರತ್ನಾತ್ರಯ ಜೈನ ಸಂಘ ದಿಂದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ರಿಗೆ ಮನವಿ: ಜೈನ ಧರ್ಮೀಯರಿಗೆ ಪ್ರತ್ಯೇಕ ನಿಗಮ ರಚನೆ ಸಚಿವರ ಭರವಸೆ

Suddi Udaya

ಬೆಳ್ತಂಗಡಿ: ಶ್ರೀರತ್ನಾತ್ರಯ ಜೈನ ಸಂಘ ಬೆಳ್ತಂಗಡಿ ಇದರ ವತಿಯಿಂದ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರನ್ನು ಇಂದು ಬೆಳಿಗ್ಗೆ ಮಂಗಳೂರಿನಲ್ಲಿ ಭೇಟಿ ಮಾಡಿ ಗೌರವಿಸಿ, ಮನವಿ ಪತ್ರವನ್ನು ನೀಡಲಾಯಿತು.


ಜಿಲ್ಲಾಮಟ್ಟದಲ್ಲಿ ಸರ್ಕಾರದ ವತಿಯಿಂದ ಸಸ್ಯಹಾರಿ ವಿದ್ಯಾರ್ಥಿ ನಿಲಯ, ಜಿನ ಮಂದಿರಗಳ ಅಭಿವೃದ್ಧಿ ಬಗ್ಗೆ ವಿಶೇಷ ಅನುದಾನ, ಪುರೋಹಿತರಿಗೆ ಗೌರವಧನ, ಸಮುದಾಯ ಭವನಗಳ ನಿಯಮಗಳ ಸರಳೀಕರಣ, ಬಸದಿಗಳ ಸಂಪರ್ಕ ರಸ್ತೆಗಳ ಡಾಮರೀಕರಣ ಮುಂತಾದ ಹಲವಾರು ಬೇಡಿಕೆಗಳನ್ನು ಸಚಿವರ ಮುಂದೆ ಮಂಡಿಸಲಾಯಿತು.
ಮನವಿ ಸ್ವೀಕರಿಸಿದ ಸಚಿವರು ಅತಿ ಶೀಘ್ರದಲ್ಲಿ ಜೈನ ಸಮುದಾಯದ ಅಭಿವೃದ್ಧಿ ನಿಗಮವನ್ನು ರಚನೆ ಮಾಡುವುದಾಗಿ ತಿಳಿಸಿದರು. ಮಾತ್ರವಲ್ಲದೆ ಸಮುದಾಯದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಹರೀಶ್ ಕುಮಾರ್ ಶಾಸಕರು ವಿಧಾನ ಪರಿಷತ್ , ಡಾ. ಕೆ. ಜಯಕೀರ್ತಿ ಜೈನ್. ಧರ್ಮಸ್ಥಳ, ಸುದರ್ಶನ್ ಜೈನ್ ಬಂಟ್ವಾಳ, ಶಶಿಕಿರಣ್ ಜೈನ್ ಬೆಳ್ತಂಗಡಿ, ಶುಭಕರ್ ಹೆಗ್ಡೆ ಇಜಿಲಾOಪಾಡಿ, ಮಹಾವೀರ್ ಜೈನ್ ದೆಪ್ಪುನಿ , ಫಣಿರಾಜ ಜೈನ್ ಕೊಕ್ಕಡ,. ಜಿನರಾಜ ಪೂವಣಿ ಉಜಿರೆ,. ಭರತ್ ಜೈನ್ ಉಜಿರೆ, ರತ್ನರಾಜ ಜೈನ್ ಪೇರಂದಬೈಲ್, ಧರಣೇಂದ್ರ ಇಂದ್ರ, ಸುದೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!