April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬರೆಂಗಾಯ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ

ನಿಡ್ಲೆ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಬರೆಂಗಾಯ ಹಾಗೂ ನಿಸರ್ಗ ಯುವಜನೇತರ ಮಂಡಲ ಬರೆಂಗಾಯ ನಿಡ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಮೊಸರು ಕುಡಿಕೆ ಉತ್ಸವವು ಸೆ.7 ರಂದು ಉ.ದ.ಕ.ಜಿ.ಪ.ಹಿ.ಪ್ರಾ. ಶಾಲೆ ಬರೆಂಗಾಯದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬರೆಂಗಾಯ ಭಟಾರಿ ಯಾನೆ ಮಲೆದೇವತೆ ದೈವಸ್ಥಾನ ಕೊಡಂಗೆ ಇದರ ಆಡಳಿತ ಟ್ರಸ್ಟ್ ಅಧ್ಯಕ್ಷ ಹೆಚ್ ವಿಶ್ವನಾಥ ರಾವ್ ಹಿರ್ತಡ್ಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಾಗೂ ಊರವರು ಭಾಗವಹಿಸಿದ್ದರು.

ವಿವಿಧ ರೀತಿಯ ಆಟೋಟ ಸ್ಫರ್ಧೆಗಳಿಗೆ ಚಾಲನೆ ನೀಡಲಾಯಿತು.

ಸಂಜೆ ನಡೆಯುವ ಸಮರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಬರೆಂಗಾಯ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರುಕ್ಮಯ್ಯ ಪೂಜಾರಿ ಪೋರ್ಕಳ ವಹಿಸಲಿದ್ದಾರೆ. ಶ್ರೀ ನಾರಾಯಣಗುರು ಕಾಲೇಜು ಕುದ್ರೋಳಿ ಇದರ ಉಪನ್ಯಾಸಕರಾದ ಕೇಶವ ಬಂಗೇರ ಧಾರ್ಮಿಕ ಪ್ರವಚನ ನೀಡಿ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಕೊಕ್ಕಡ ಉಪವಲಯ ಅರಣ್ಯಧಿಕಾರಿ ಕೆ.ಆರ್ ಅಶೋಕ್, ನಿಡ್ಲೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶ್ಯಾಮಲ, ಬರೆಂಗಾಯ ಶಾಲಾ ಮುಖ್ಯ ಶಿಕ್ಷಕ ಗೋಪಾಲ್ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಿಯಾರು ಶಾಲಾ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕು.ವಸಂತಿ ಟಿ, ಕೊಕ್ಕಡ ಉಪವಲಯ ಅರಣ್ಯಾಧಿಕಾರಿ ಕೆ.ಆರ್ ಅಶೋಕ್, ಕೊಕ್ಕಡ ಫ್ರೌಢ ಶಾಲಾ ಶಿಕ್ಷಕ ದಯಾನಂದ ಪಿ.ಡಿರವರನ್ನು ಸನ್ಮಾನಿಸಲಾಗುವುದು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದ.ಕ ಜಿಲ್ಲೆಯ ಸುಪ್ರಸಿದ್ದ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ಡಿ ಮನೋಹರ್ ಕುಮಾರ್ ವಿರಚಿತ ಮತ್ತು ಅಶೋಕ್ ಶೆಟ್ಟಿ ಸರಪಾಡಿ ಇವರ ಸಂಯೋಜನೆಯಲ್ಲಿ ಯಕ್ಷಗಾನ ಗೆಜ್ಜೆದ ಪೂಜೆ ಜರುಗಲಿದೆ.

Related posts

ಕಲ್ಮಂಜ 88 ನೇ ವಾರ್ಡಿನ ಬಿಜೆಪಿ ಪದಾಧಿಕಾರಿಗಳ ಆಯ್ಕೆ

Suddi Udaya

ಧರ್ಮಸ್ಥಳ: ಜೋಡುಸ್ಥಾನದಲ್ಲಿ ಮಹಿಳೆ ನೇಣುಬಿಗಿದು ಆತ್ಮಹತ್ಯೆ

Suddi Udaya

ಬಳಂಜ: ಬೋಂಟ್ರೊಟ್ಟುಗುತ್ತು ದೈವಸ್ಥಾನ ಕ್ಷೇತ್ರದಲ್ಲಿ ಚಾವಡಿಯಲ್ಲಿ ದೈವಗಳ ಪ್ರತಿಷ್ಠೆ ,ಕಲಶಾಭಿಷೇಕ: ಸಂಜೆ ಬಳಂಜದಿಂದ ಬೊಂಟ್ರೋಟ್ಟು ಕ್ಷೇತ್ರಕ್ಕೆ ಹಸಿರುವಾಣಿ ಮೆರವಣಿಗೆ

Suddi Udaya

ಕಣಿಯೂರು: ಶ್ವೇತ ಸಮೂಹ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ರಜತ ಮಹೋತ್ಸವ

Suddi Udaya

ಲಾಯಿಲ ಪ್ರಸನ್ನ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ

Suddi Udaya

ಬೆಳ್ತಂಗಡಿ ಕಾಂಗ್ರೇಸ್ ಮಹಿಳಾ ಘಟಕದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ

Suddi Udaya
error: Content is protected !!