24.4 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮದ್ದಡ್ಕ ಶ್ರೀರಾಮ ಸೇವಾ ಸಮಿತಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದ್ದಡ್ಕ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯಕ್ತ ಮೊಸರು ಕುಡಿಕೆ ಉತ್ಸವ

ಬೆಳ್ತಂಗಡಿ: ಶ್ರೀಕ್ರಷ್ಣ ಜನ್ಮಾಷ್ಠಮಿ  ಸಾಮೂಹಿಕ ಆಚರಣೆ ಮಾಡುವ ಮೂಲಕ ಸಂಬಂಧ ವೃದ್ಧಿಯಾಗುತ್ತದೆ. ಶ್ರೀಕೃಷ್ಣ ಮನುಕುಲಕ್ಕೆ‌ ನೀಡಿದ ಸಂದೇಶ ಅಪಾರವಾಗಿದ್ದು ಸಮಾಜದ ಉದ್ಧಾರದ ಚಿಂತನೆ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ಗುರುವಾಯನಕೆರೆ ಪ್ರೌಢಶಾಲೆ ಸಹ ಶಿಕ್ಷಕ ಯೋಗೀಶ್ ನಾಯಕ್ ನುಡಿದರು.

ಅವರು  ಶ್ರೀರಾಮ ಸೇವಾ ಸಮಿತಿ ಮದ್ದಡ್ಕ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದ್ದಡ್ಕ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯಕ್ತ ಜರಗಿದ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಮಾಜಿ ಶಾಸಕ ಕೆ ಪ್ರಭಾಕರ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯೂನಿಯನ್ ಬ್ಯಾಂಕ್ ಮದ್ದಡ್ಕ ಶಾಖೆಯ ಮುಖ್ಯ ಪ್ರಭಂದಕರು ಸುಧೀರ್ ನಾಯ್ಕ್ ಆಗಮಿಸಿದ್ದರು. ವೇದಿಕೆಯಲ್ಲಿ ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷ ರಾಜ್ ಪ್ರಕಾಶ್ ಪಡ್ಡೈಲು, ಗೌರವಾಧ್ಯಕ್ಷ ಶೇಖರ ಶೆಟ್ಟಿ ಉಪ್ಪಡ್ಕ, ಪ್ರಧಾನ ಕಾರ್ಯದರ್ಶಿ ಮನೋಹರ ಕೇದಳಿಕೆ, ಕೋಶಾಧಿಕಾರಿ ಹರೀಶ್ ಬಪ್ಪಳಿಕೆ, ಬಜರಂಗದಳ ಮದ್ದಡ್ಕ ಘಟಕದ ಸಂಚಾಲಕ ಯಶೋದರ ಶೆಟ್ಟಿ ಅರ್ಕಜೆ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಗಣೇಶ್ ಶೆಟ್ಟಿ ಅರ್ಕಜೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇಂದ್ರ ಸರಕಾರಿ ನೌಕರಿಯಿಂದ ನಿವೃತ್ತಿಗೊಂಡ ವಿಠಲ ಶೆಟ್ಟಿ ಉಪ್ಪಡ್ಕ ಇವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.

ಬೆಳಿಗ್ಗೆ ಶ್ರೀ ರಾಮ ಭಜನಾ ಮಂದಿರದಲ್ಲಿ ಗಣಹೋಮ ವಿಶೇಷ ಪೂಜಾ ವೈದಿಕ ಕಾರ್ಯಕ್ರಮವನ್ನು ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರದಾನ ಅರ್ಚಕ ವೇದಮೂರ್ತಿ ಯಂ. ರಘರಾಮ ಭಟ್ ಮಠ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ಮಕ್ಕಳಿಗೆ ಸಾರ್ವಜನಿಕರಿಗೆ ಅಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಪ್ರಭಾಕರ‌ ಶೆಟ್ಟಿ ಉಪ್ಪಡ್ಕ ಸ್ವಾಗತಿಸಿ, ಉಮೇಶ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕೋಟ್ಯಾನ್ ಧನ್ಯವಾದವಿತ್ತರು.

ಸಂಜೆ ಭಜನಾ ಮಂದಿರದಲ್ಲಿ ಮಹಾಲಿಂಗೇಶ್ವರ ಭಜನಾ ಮಂಡಳಿ ಓಡೀಲು ಇವರಿಂದ ಭಜನಾ ಕಾರ್ಯಕ್ರಮ ಜರಗಿತು. ಶ್ರೀರಾಮ ಸೇವಾ ಸಮಿತಿ. ವಿಶ್ವ ಹಿಂದೂ ಪರಿಷತ್. ಭಜರಂಗದಳ ಪಧಾದಿಕಾರಿಗಳು ಸರ್ವ ಸದಸ್ಯರು ಕಾರ್ಯಕ್ರಮದ ಯಶಶ್ವಿಗೆ ಸಹಕರಿಸಿದರು .

Related posts

ಡಿ.19: ಗುರುವಾಯನಕೆರೆ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಕನ್ಯಾಡಿ: ಪ್ರಗತಿಪರ ಕೃಷಿಕ ಬೊಲ್ಲೊಟ್ಟು ಬಾಬು ಶೆಟ್ಟಿ ನಿಧನ

Suddi Udaya

5‌ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ: ಅಂತಿಮ ವೇಳಾಪಟ್ಟಿ ಪ್ರಕಟ

Suddi Udaya

ಉಜಿರೆ: ಫಾರೆಸ್ಟರ್ ಲೋಕೇಶ್ ಹೃದಯಾಘಾತದಿಂದ ನಿಧನ

Suddi Udaya

ಸುಲ್ಕೇರಿಯಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷರು ಹಾಗೂ ವಲಯ ಅಧ್ಯಕ್ಷರ ಭೇಟಿ ಕಾರ್ಯಕ್ರಮ

Suddi Udaya

ಕುವೆಟ್ಟು: ಕರ್ತವ್ಯ ಲೋಪ ಎಸಗಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ: ಸಾಮಾನ್ಯ ಸಭೆ ಬಹಿಷ್ಕರಿಸಿದ ಸದಸ್ಯರು

Suddi Udaya
error: Content is protected !!