April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮುಂಡೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ, ನೂತನ ಯುವಕ ಮಂಡಲಕ್ಕೆ ಚಾಲನೆ, ಬಡ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

ಬಂದಾರು : ಬಂದಾರು ಗ್ರಾಮದ ಮುಂಡೂರು ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ,ನೂತನವಾಗಿ ರಚನೆಗೊಂಡಿರುವ ಚಾಮುಂಡೇಶ್ವರಿ ಯುವಕ ಮಂಡಲ ಸಂಘಕ್ಕೆ ಚಾಲನೆ, ಹಾಗೂ ಬಡ ಕುಟುಂಬ ಉಷಾ ವಿಶ್ವನಾಥ ಬಜಿಲ ಮನೆಯವರಿಗೆ ಆಹಾರ ಕಿಟ್ ಸೆ. 6 ರಂದು ವಿತರಿಸಲಾಯಿತು.


ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಆನಂದ ಗೌಡ ನೆರವೇರಿಸಿದರು. ಮುಖ್ಯ ಅಥಿತಿಗಳಾಗಿ ಬಂದಾರು ಗ್ರಾಮ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಇವರು ಕಾರ್ಯಕ್ರಮಕೆ ಶುಭಕೋರಿದರು.

ವೇದಿಕೆಯಲ್ಲಿ ಗಿರೀಶ್ ಗೌಡ ಬಿ.ಕೆ ಕುಂಬುಡoಗೆ, ಚಾಮುಂಡೇಶ್ವರಿ ಯುವಕ ಮಂಡಲದ ಅಧ್ಯಕ್ಷರಾದ ಅಶ್ವಥ್ ಗೌಡ, ಅಕ್ಷಯ ಗೌಡ,ಶ್ರೀಮತಿ ಧರ್ಣಮ್ಮ ಸುಬ್ಬಣ್ಣ ಗೌಡ, ನಾರಾಯಣ ಗೌಡ ಮುಂಡೂರು, ಯುವಕ ಮಂಡಲದ ಪದಾಧಿಕಾರಿಗಳು,ಸದಸ್ಯರು, ಭಕ್ತಾಭಿಮಾನಿಗಳು, ಮನೆಯವರು ಉಪಸ್ಥಿತರಿದ್ದರು.

ವಿವಿಧ ಆಟೋಟ ಸ್ಪರ್ಧೆಗಳು,ಕಡುಬಡತನದ ಮನೆಗೆ ಆಹಾರ ವಿತರಣೆ ಕಾರ್ಯಕ್ರಮ, ಅನ್ನದಾನ ಸೇವೆ, ರಾತ್ರಿ ಶ್ರೀಕೃಷ್ಣ ದೇವರಿಗೆ ವಿಶೇಷ ಪೂಜೆ. ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನೆರವೇರಿಸಲಾಯಿತು.

Related posts

ಉಜಿರೆ: ಅತ್ತಾಜೆ ಅರಫಾ ಜಾಮಿಅಃ ಮಸ್ಜಿದ್ ನಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

Suddi Udaya

ಮಗುವಿಗೊಂದು ಮರ ಯೋಜನೆಗೆ ಮುಂದಾದ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆ

Suddi Udaya

ಗುರುವಾಯನಕೆರೆ: ಖಾಸಗಿ ಬಸ್ಸು ಡಿಕ್ಕಿ ಹೊಡೆದು ಪಾದಚಾರಿ ಸಾವು

Suddi Udaya

ತಣ್ಣೀರುಪಂತ ಪ್ರಾ.ಕೃ.ಪ. ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸಾಧನಾ ಪ್ರಶಸ್ತಿ

Suddi Udaya

ಬೆಂಗಳೂರಿನಲ್ಲಿ ಗುರುವಾಯನಕೆರೆ ಜ್ಯೋತಿಷಿ ಬಿ.ಕೆ. ಸುಬಾಷ್ ಚಂದ್ರ ಜೈನ್ ರವರ “ಶ್ರೀ ಸ್ವಸ್ತಿಕ ಜ್ಯೋತಿಷ್ಯಾಲಯ” ಶಾಖೆ ಶುಭಾರಂಭ

Suddi Udaya

ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜಾತ್ರೋತ್ಸವ ಸಮಿತಿಯ ನೂತನ ಪದಾದಿಕಾರಿಗಳ ಆಯ್ಕೆ

Suddi Udaya
error: Content is protected !!