September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವರ್ತಕರ ಸಂಘದಿಂದ ನೂತನ ಡಿ.ವೈ.ಎಸ್.ಪಿ. ಸಿ.ಕೆ ರೋಹಿಣಿ ಯವರಿಗೆ ಅಭಿನಂದನೆ

ಬೆಳ್ತಂಗಡಿ: ಹೊಸದಾಗಿ ಬೆಳ್ತಂಗಡಿ ಪೊಲೀಸ್ ಉಪವಿಭಾಗಕ್ಕೆ ಪ್ರಥಮ ಡಿ.ವೈ.ಎಸ್.ಪಿ ಯಾಗಿ ಅಧಿಕಾರ ಸ್ವೀಕರಿಸಿದ ಡಿ.ವೈ.ಎಸ್.ಪಿ ರೋಹಿಣಿ ಸಿ.ಕೆ.ಯವರನ್ನು ಅವರ ಕಛೇರಿಯಲ್ಲಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸುರಕ್ಷತೆಗೆ ಸಂಬಂಧಪಟ್ಟ ವಿಚಾರಗಳನ್ನು ಹಾಗೂ ಬೆಳ್ತಂಗಡಿ ಪಟ್ಟಣದ ಕೆಲವು ಜಂಕ್ಷನ್ ಗಳಲ್ಲಿ ಸಿ ಸಿ ಕ್ಯಾಮರಾ ಅಳವಡಿಸುವ ಬಗ್ಗೆ ಅವರ ಗಮನಕ್ಕೆ ತರಲಾಯಿತು.

ಡಿ.ವೈ.ಎಸ್ಪಿ ಯವರು ಕಾನೂನು ಹಾಗೂ ಸುರಕ್ಷಾ ದೃಷ್ಟಿಯಲ್ಲಿ ತಮ್ಮ ಕರ್ತವ್ಯದಲ್ಲಿ ಉತ್ತಮವಾದ ಕೆಲಸ ಮಾಡುವ ಉದ್ದೇಶದಿಂದ ನಿಮ್ಮ ತಾಲೂಕಿಗೆ ಬಂದಿದ್ದೇನೆ. ನೀವೆಲ್ಲರೂ ಬಂದು ನನಗೆ ಭೇಟಿಯಾಗಿ ಶುಭ ಹಾರೈಸುವಾಗ ತುಂಬಾ ಸಂತೋಷ ವಾಗುತ್ತದೆ ಹಾಗೂ ನಿಮ್ಮೆಲ್ಲರ ಸಹಕಾರ ಕೋರುತ್ತಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷರು ರೋನಾಲ್ಡ್ ಲೋಬೊ, ಉಪಾಧ್ಯಕ್ಷರು ಶಶಿಧರ್ ಪೈ, ಜತೆ ಕಾರ್ಯದರ್ಶಿ ಯಶವಂತ್ ಪಟವರ್ದನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಶೀತಲ್ ಜೈನ್, ಶರ್ಮಿಳಾ ಮೋರಸ್, ಶಾo ಬಾವಿ ಬಂಗೇರ ,ವಿಲ್ಸನ್ ಗೊನ್ಸಲ್ವಿಸ್, ವಿನ್ಸo ಟ್ ಡಿಸೋಜಾ ಉಪಸ್ಥಿತರಿದ್ದರು.

Related posts

ಎನ್.ಸಿ.ಸಿ ರೈಫಲ್ ಫೈಯರಿಂಗ್ ಸ್ಪರ್ಧೆ: ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಕೊಯ್ಯೂರು: ಶ್ರೀಕೃಷ್ಣ ಭಜನಾ ಮಂಡಳಿಗೆ ಇನ್ವರ್ಟರ್ ಕೊಡುಗೆ

Suddi Udaya

ಮರೋಡಿ 25 ಕೆವಿ ಸಾಮರ್ಥ್ಯದ ಪರಿವರ್ತಕ ಧರಾಶಾಯಿ: ಗಾಳಿ ಮಳೆ ಮೆಸ್ಕಾಂಗೆ 5 ಲಕ್ಷ ರೂ. ನಷ್ಟ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ

Suddi Udaya

ಅಸೌಖ್ಯದಿಂದ ಬಳಲಿ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ನ.ಪಂ ಉಪಾಧ್ಯಕ್ಷ ಮತ್ತಿತರರು

Suddi Udaya

ಉಜಿರೆ ಸಂತ ಅಂತೋಣಿ ಚರ್ಚ್ ಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!