23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ನಿಟ್ಟಡೆ: ತೋಟದ ಶೆಡ್‌ ನಲ್ಲಿ ತಂದಿರಿಸಿದ್ದ ರೂ.70 ಸಾವಿರ ಮೌಲ್ಯದ ಎರಡು ವಿದ್ಯುತ್ ಚಾಲಿತ ಪಂಪು ಕಳವು

ಬೆಳ್ತಂಗಡಿ: ಕುಕ್ಕೇಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸರ್ಕಾರಿ ಕಾಮಗಾರಿಗಾಗಿ, ಬೆಳ್ತಂಗಡಿ ತಾಲೂಕು ನಿಟ್ಟಡೆ ಗ್ರಾಮದ ಸತ್ಯರಾಜ್‌ ಎಂಬವರ ಬಾಬ್ತು ತೋಟದ ಶೆಡ್‌ ನಲ್ಲಿ ತಂದಿರಿಸಿದ್ದ ಅಂದಾಜು ರೂ.70,000 ಮೌಲ್ಯದ ಎರಡು ವಿದ್ಯುತ್ ಚಾಲಿತ ಪಂಪುಗಳನ್ನು ಹಾಗೂ ಶೆಡ್‌ ನ ಹೊರಗಡೆ ಇರಿಸಿದ್ದ ಪೈಪುಗಳನ್ನು, ಯಾರೋ ಕಳ್ಳರು ಕಳವುಗೈದ ಘಟನೆ ನಡೆದಿದೆ.

ಹಿರೆಕೆರೂರು ತಾಲೂಕು, ಹಾವೇರಿ ಜಿಲ್ಲೆ ನಿವಾಸಿ ಪವನ್ ಎಸ್. ಹಿತ್ತಲಮನೆ (28ವ) ಎಂಬವರ ದೂರಿನಂತೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಗಸ್ಟ್ 23 ರಂದು ಸಂಜೆಯಿಂದ ಸೆ .07 ರಂದು ಮಧ್ಯಾಹ್ನ ಅವಧಿಯಲ್ಲಿ ಶೆಡ್ ಬಾಗಿಲನ್ನು ಮುರಿದು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣಾ 56/2023 ಕಲಂ: 454,457,380 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಲಾಯಿಲ: ಕನ್ನಾಜೆ ನಿವಾಸಿ ರಾಜು ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಸೆ.16: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಿಡ್ಲೆ : ಕೊಡಂಗೆಯಲ್ಲಿ ಗುಡ್ಡ ಕುಸಿತ: ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ತುರ್ತು ಕಾರ್ಯಾಚರಣೆ

Suddi Udaya

ಅಳದಂಗಡಿ ವಲಯ ಪ್ರಗತಿ ಬಂಧು ಒಕ್ಕೂಟ ಜನಜಾಗೃತಿ ಗ್ರಾಮ ಸಮಿತಿ ಪದಗ್ರಹಣ ಸಮಾರಂಭ

Suddi Udaya

ಸಿ.ಎ ಪರೀಕ್ಷೆಯಲ್ಲಿ ಕುವೆಟ್ಟು ಮೇಗೇಶ್ ಯು. ಶೆಟ್ಟಿ ಉತ್ತೀರ್ಣ

Suddi Udaya

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ : ವೀಲ್ ಚೇರ್ ಹಸ್ತಾಂತರ

Suddi Udaya
error: Content is protected !!