25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಮೂಡುಕೋಡಿ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ 3ನೇ ವರ್ಷದ ಮೊಸರು ಕುಡಿಕೆ ಉತ್ಸವ

ವೇಣೂರು: ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ. ವಿವಿಧ ಆಚರಣೆ, ಸಂಸ್ಕೃತಿಯಿಂದ ದೇಶ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇಂತಹ ನಾಡಿನಲ್ಲಿ ಎಲ್ಲಾ ಜನಾಂಗದವರನ್ನು ಸೇರಿಸಿ ಆಚರಿಸುವ ಮೂಡುಕೋಡಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾಜಕ್ಕೆ ಮಾದರಿ ಎಂದು ವೇಣೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿಇ ಹೇಳಿದರು.

ಅವರು ಮೂಡುಕೋಡಿಯಲ್ಲಿ ನಡೆದ 3ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಅವರು ಭಾಗವಹಿಸಿ ಮಾತನಾಡಿ, ಈ ರೀತಿಯ ಆಚರಣೆ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ ಎಂದರು.

ನ್ಯಾಯವಾದಿ ನಾಗೇಶ್ ಶೆಟ್ಟಿ ಡಿ. ಮಾತನಾಡಿ, ಯಾವುದೇ ಕಾರ್ಯಕ್ರಮ ಯಶಸ್ವಿ ಆಗಬೇಕಾದರೆ ಸಂಘಟಕರ ಶ್ರಮ ಅತೀ ಮುಖ್ಯ, ಇಲ್ಲಿಯ ಸಂಘಟಕರು ಬಹಳಷ್ಟು ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಿಸಿದ್ದಾರೆ ಎಂದರು. ವೇದಿಕೆಯಲ್ಲಿ ವೇಣೂರು ಪೆರ್ಮುಡ ಕಂಬಳ ಸಮಿತಿಯ ಅಧ್ಯಕ್ಷ ನಿತೀಶ್ ಹೆಚ್., ವೇಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪುಷ್ಪ ಡಿ., ಸದಸ್ಯರಾದ ವೀಣಾ ದೇವಾಡಿಗ, ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಗಣೇಶ್ ನಾರಾಯಣ ಪಂಡಿತ್, ವೇಣೂರು ಕ್ರಿಸ್ತರಾಜ ದೇವಾಲಯದ ಯುವ ಸಂಘಟನೆ ಅಧ್ಯಕ್ಷ ಅನುಷ್ ಕ್ರಾಸ್ತ, ಮೂಡುಕೋಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ಭಟ್, ಉದ್ಯಮಿಗಳಾದ ನಾರಾಯಣ ಪೂಜಾರಿ ರಮ್ಯ ಫ್ಯಾನ್ಸಿ, ಉಂಬೆಟ್ಟು ಶಾಲೆ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಕ್ರೀಯಾ, ಕಾರ್ಯಕ್ರಮ ಪ್ರಮುಖ ಸಂಯೋಜಕ ವೇಣೂರು ಗ್ರಾಮ ಪಂಚಾಯತ್ ಸದಸ್ಯರಾದ ಅನೂಪ್ ಜೆ. ಪಾಯಸ್ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ನಾರಡ್ಕ ಸ್ವಾಗತಿಸಿ, ನ್ಯಾಯವಾದಿ ಸತೀಶ್ ಪಿ.ಎನ್. ವಂದಿಸಿದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.

Related posts

ಕಳೆಂಜ: ನಡುಜಾರು ಸ.ಕಿ.ಪ್ರಾ. ಶಾಲಾ ಮಕ್ಕಳಿಗೆ ರಾಜೇಶ್ ನಿಡ್ಡಾಜೆ ಯವರಿಂದ ಸಮವಸ್ತ್ರ ವಿತರಣೆ

Suddi Udaya

ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯಿಂದ ರೂ.6.96 ಲಕ್ಷ ವಂಚನೆ

Suddi Udaya

ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರಿನಿಂದ ಬಸ್ ತಡೆಹಿಡಿದು ಗಲಾಟೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಶವ ಪತ್ತೆ: ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಉಜಿರೆ ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ತುಳು ಶಿವಳ್ಳಿ ಸಭಾ: ದಶಮಾನೋತ್ಸವ ಆಮಂತ್ರಣ ಪತ್ರ ಬಿಡುಗಡೆ

Suddi Udaya
error: Content is protected !!