ನಿಡ್ಲೆ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಬರೆಂಗಾಯ ಹಾಗೂ ನಿಸರ್ಗ ಯುವಜನೇತರ ಮಂಡಲ ಬರೆಂಗಾಯ ನಿಡ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಮೊಸರು ಕುಡಿಕೆ ಉತ್ಸವವು ಸೆ.7 ರಂದು ಉ.ದ.ಕ.ಜಿ.ಪ.ಹಿ.ಪ್ರಾ. ಶಾಲೆ ಬರೆಂಗಾಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬರೆಂಗಾಯ ಭಟಾರಿ ಯಾನೆ ಮಲೆದೇವತೆ ದೈವಸ್ಥಾನ ಕೊಡಂಗೆ ಇದರ ಆಡಳಿತ ಟ್ರಸ್ಟ್ ಅಧ್ಯಕ್ಷ ಹೆಚ್ ವಿಶ್ವನಾಥ ರಾವ್ ಹಿರ್ತಡ್ಕ ಉದ್ಘಾಟಿಸಿದರು.
ವಿವಿಧ ಆಟೋಟ ಸ್ಫರ್ಧೆಗಳಿಗೆ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಬರೆಂಗಾಯ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರುಕ್ಮಯ್ಯ ಪೂಜಾರಿ ಪೋರ್ಕಳ ವಹಿಸಿದರು. ನಿಡ್ಲೆ ಗ್ರಾ,ಪಂ. ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಹೆಬ್ಬಾರ್ ಧಾರ್ಮಿಕ ಪ್ರವಚನ ನೀಡಿದರು.
ವೇದಿಕೆಯಲ್ಲಿ ನಿಡ್ಲೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶ್ಯಾಮಲ, ಕೊಕ್ಕಡ ಉಪವಲಯ ಅರಣ್ಯಧಿಕಾರಿ ಕೆ.ಆರ್ ಅಶೋಕ್, ಬರೆಂಗಾಯ ಶಾಲಾ ಮುಖ್ಯ ಶಿಕ್ಷಕ ಗೋಪಾಲ್, ಬರೆಂಗಾಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಕೆ., ಸಮಿತಿಯ ಗೌರವಾಧ್ಯಕ್ಷ ಭಾಸ್ಕರ್ ಆಚಾರಿ ನೆಕ್ಕರೆ, ಅಧ್ಯಕ್ಷ ಶ್ರೀನಿವಾಸ ಗೌಡ ಕಾಟ್ಲಾ, ನಿಸರ್ಗ ಯುವಜನೇತರ ಮಂಡಲ ಅಧ್ಯಕ್ಷ ಪುನೀತ್ ಪೊಂರ್ದಿಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಿಯಾರು ಶಾಲಾ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕು.ವಸಂತಿ ಟಿ, ಕೊಕ್ಕಡ ಉಪವಲಯ ಅರಣ್ಯಾಧಿಕಾರಿ ಕೆ.ಆರ್ ಅಶೋಕ್, ಕೊಕ್ಕಡ ಫ್ರೌಢ ಶಾಲಾ ಶಿಕ್ಷಕ ದಯಾನಂದ ಪಿ.ಡಿರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಾಗೂ ಊರವರು ಭಾಗವಹಿಸಿದ್ದರು. ಬಹುಮಾನ ವಿಜೇತರ ಪಟ್ಟಯನ್ನು ಗಾಯತ್ರಿ ಹೆಚ್. ಗೌಡ, ಗುಣಶ್ರೀ, ಲೋಕೇಶ್ ಓದಿದರು.
ಆದಿತ್ಯ ಜೆ ಶೆಟ್ಟಿ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಅಳಕೆ ಸ್ವಾಗತಿಸಿದರು. ನವೀನ್ ಗಾಂತ್ರಂಡ ಧನ್ಯವಾದವಿತ್ತರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯ ಸುಪ್ರಸಿದ್ದ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ಡಿ. ಮನೋಹರ್ ಕುಮಾರ್ ವಿರಚಿತ ಮತ್ತು ಅಶೋಕ್ ಶೆಟ್ಟಿ ಸರಪಾಡಿ ಇವರ ಸಂಯೋಜನೆಯಲ್ಲಿ ಯಕ್ಷಗಾನ ಗೆಜ್ಜೆದ ಪೂಜೆ ಜರುಗಿತು.