ಸುಲ್ಕೇರಿ : ಶ್ರೀರಾಮ ಶಾಲೆ, ಸುಲ್ಕೇರಿಯಲ್ಲಿ ಸೆ 8 ರಂದು ಮಂಗಳೂರು ರಿಫೈನರ್ ಎಂಡ್ ಪೆಟ್ರೋ ಕೆಮಿಕಲ್ ಲಿಮಿಟೆಡ್ (MRPL)ಮಂಗಳೂರು ರವರು ಸಿಎಸ್ಆರ್ ಫಂಡ್ ಮೂಲಕ 50 ಲಕ್ಷ ಮೌಲ್ಯದ 4 ಕೊಠಡಿಗಳನ್ನು ನೀಡಿದ್ದು ಆ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ ಪ್ರಭಾಕರ್ ಭಟ್ ಕಲ್ಲಡ್ಕ ನೆರವೇರಿಸಿ, ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ದಯಾನಂದ ಪ್ರಭು, ಮ್ಯಾನೇಜರ್ ಮಾರ್ಕೆಟಿಂಗ್ ಆಪರೇಷನ್, ಎಮ್ ಆರ್ ಪಿಎಲ್ ಮಂಗಳೂರು, ವಿಧಾನ ಪರಿಷತ್ ಬೆಳ್ತಂಗಡಿ ಸದಸ್ಯ ಪ್ರತಾಪ್ ಸಿಂಹ ನಾಯಕ್, ಡಾ. ಸೂರ್ಯಕಾಂತ ಪೈ ,ಖ್ಯಾತ ದಂತ ವೈದ್ಯರು ಮಂಗಳೂರು ಉಪಸ್ಥಿತರಿದ್ದರು. ಎಮ್ ಆರ್ ಪಿಎಲ್ ನ ಸಮಾಜಕ್ಕೆ ನಿಷ್ಠಾವಂತರಾಗಿ ಚಿಂತನೆ ಮಾಡುವಂತಹ ಮೌಲ್ಯ ಸಿಗುವುದು ಶಾಲೆಗಳಿಂದ ಮಾತ್ರ ಎಂದು ತಿಳಿಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಡಾ.ಪ್ರಭಾಕರ್ ಭಟ್, ಕಲ್ಲಡ್ಕ ಇವರು ನಮ್ಮ ದೇಶದ ಸಂಸ್ಕೃತಿ ಚರಿತೆಯನ್ನು ಇವತ್ತಿನ ಮಕ್ಕಳಿಗೆ ತಿಳಿಸುವ ಅವಶ್ಯಕತೆ ಇದೆ, ಮಕ್ಕಳು ತಂದೆ ತಾಯಿ ಸಮಾಜವನ್ನು ಗೌರವಿಸುವಂತಾಗಲು ಗುಣಮಟ್ಟದ ಶಿಕ್ಷಣವನ್ನು ಚಿಕ್ಕವಯಸ್ಸಿನಿಂದಲೇ ಕೊಡುವ ಅವಶ್ಯಕತೆ ಇದೆ ಎಂದು ತಿಳಿಸಿದರು. ಕಾರ್ಯಕ್ರಮದ ಅತಿಥಿಗಳನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜ ಪೂಜಾರಿ ಸ್ವಾಗತಿಸಿದರು, ಶಿಲ್ಪಾ ಮಾತಾಜಿ ವಂದಿಸಿದರು, ಶ್ರೀಮತಿ ಹೇಮಲತ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.