ಕೊಕ್ಕಡ: ಶ್ರೀ ಕೃಷ್ಟ ಭಜನಾಮಂದಿರ ಉಪ್ಪಾರಪಳಿಕೆ ಕ್ರೀಡಾಂಗಣದಲ್ಲಿ 24ನೇ ವರ್ಷದ ಅಷ್ಟಮಿ ಆಚರಣೆ ಶ್ರದ್ದಾ ಗೆಳೆಯರ ಬಳಗ ಅಷ್ಟಮಿ ಆಚರಣ ಸಮಿತಿ ಮೂಲಕ ನಡೆಯಿತು.
ಕಾರ್ಯಕ್ರಮವು ಶ್ರದ್ದಾ ಗೆಳೆಯರ ಬಳಗ ಅಧ್ಯಕ್ಷ ಶ್ರೀಧರ್ ದೇರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೌತಡ್ಕ ಮಹಾಗಣಪತಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ರಾವ್ ಮುಂಡ್ರುಪ್ಪಾಡಿ ಯವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿ ಸನಾತನ ಧರ್ಮದ ಅಷ್ಟಮಿ ಆಚರಣೆ ಹಿಂದೂ ಧರ್ಮ ಒಗ್ಗೂಡುವಿಕೆ ಮೂಲಕ ಸಮಾಜಕ್ಕೆ ಧರ್ಮ ಸಂದೇಶ ಸಾರುತದೆ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೊಕ್ಕಡ ಗ್ರಾಮಪಂಚಾಯತ್ ಅಧ್ಯಕ್ಷರು ಶ್ರೀಮತಿ ಬೇಬಿ ಮಾತನಾಡಿ ಶುಭ ಹಾರೈಸಿದರು.. ಕೊಕ್ಕಡ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ್ ಗೌಡ ಮಲ್ಲಿಗೆ ಉಪಸ್ಥಿತರಿದ್ದರು.
ಶ್ರದ್ದಾ ಗೆಳೆಯರ ಬಳಗದ ಗೌರವ ಸಲಹೆಗಾರರು ಯೋಗೀಶ್ ಅಲಂಬಿಲ ಕಾರ್ಯಕ್ರಮ ನಿರೂಪಿಸಿದರು.. ಕುಶಾಂತ್ ಸ್ವಾಗತಿಸಿ, ಗೋಪಾಲ ಅಲಂಬಿಲ ವಂದಿಸಿದರು, ಬಳಿಕ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ಶ್ರೀನಾಥ್ ಬಡೆಕಾಯಿಲ್, ನವೀನ್ ಅಲಂಬಿಲ, ಶಿವಾನಂದ್ ಸಂಕೇಶ, ದಾಮೋದರ್ ಅಜ್ಜಾವರ, ಬಾಲಕೃಷ್ಣ ಬಳಕ್ಕ, ಶ್ರೀಕಾಂತ್ ಬಡೆಕಾಯಿಲ್, ಆನಂದ ಅಡೈ, ರಮೇಶ್ ಕುಡ್ಲ ಶ್ರದ್ದಾ ಗೆಳೆಯರ ಬಳಗ ಸದಸ್ಯರು, ಗ್ರಾಮಸ್ಥರು ಸಹಕರ ನೀಡಿದರು.