April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಸುವರ್ಣ ಸಂಭ್ರಮ ವರ್ಷದ ಪ್ರಥಮ ಯೋಗಾಸನ ಶಿಬಿರ ಉದ್ಘಾಟನೆ

ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಸುವರ್ಣ ಸಂಭ್ರಮ ವರ್ಷದ ಪ್ರಥಮ ಯೋಗಾಸನ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಮಾಯ ಮಹದೇವ ದೇವಸ್ಥಾನ ,ಬೆಳಾಲು ಇಲ್ಲಿನ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾಗಿ ಲಯನ್ ಉಮೇಶ್ ಶೆಟ್ಟಿ ವಹಿಸಿದರು. ಶ್ರೀಮತಿ ವಿದ್ಯಾ ಶ್ರೀನಿವಾಸ್ ಶಿಬಿರವನ್ನು ಉದ್ಘಾಟಿಸಿ ಯೋಗಾಸನದ ಮಹತ್ವದ ಬಗ್ಗೆ ತಿಳಿಸಿದರು..

ಮುಖ್ಯ ಅತಿಥಿಗಳಾಗಿ ವಿಠಲ ಮಡಿವಾಳ ಹಾಗೂ ಕೃಷ್ಣಪ್ಪಗೌಡ, ಲಯನ್ಸ್ ಕ್ಲಬ್ ನ ಪೂರ್ವ ಪ್ರಾಂತ್ಯ ಅಧ್ಯಕ್ಷರಾದ ಲಯನ್ ವಸಂತ ಶೆಟ್ಟಿ ಶ್ರಧ್ಧಾ , ನಿಕಟ ಪೂರ್ವ ಅಧ್ಯಕ್ಷರಾದ ಲಯನ್ ಡಾ| ದೇವಿ ಪ್ರಸಾದ್ ಬೊಲ್ಮ , ಯೋಗ ತರಬೇತುದಾರರಾದ ಕು. ಭಾಷಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕು. ಭಾಷಿಣಿ ಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ನಿಕಟ ಪೂರ್ವ ಅಧ್ಯಕ್ಷರಾದ ಲಯನ್ ಡಾ ದೇವಿಪ್ರಸಾದ್ ಬೊಲ್ಮ ಸ್ವಾಗತಿಸಿದರು.

ನಿಕಟ ಪೂರ್ವ ಅಧ್ಯಕ್ಷರಾದ ಡಾ| ದೇವಿ ಪ್ರಸಾದ್ ಬೊಲ್ಮ ಧನ್ಯವಾದವಿತ್ತರು. ಕಾರ್ಯದರ್ಶಿ ಲಯನ್ ಅನಂತಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Related posts

ಕುದ್ರಾಯ ಸಮೀಪದ ಬೋಳಿಯಾರುನಲ್ಲಿ ಮೋರಿಯ ತಡೆಗೋಡೆ ಕುಸಿತ

Suddi Udaya

ಹೊಸಂಗಡಿ: ಭೀಮ್ ಆರ್ಮಿ ಸಂಘಟನೆ ಉದ್ಘಾಟನೆ

Suddi Udaya

ತಾಲೂಕಿನ ಬಡ ಮುಸ್ಲಿಂರನ್ನು ಅಜ್ಮೀರ್‌ಗೆ ಕಳುಹಿಸುವ ಪಿತೂರಿ: ಮತದಾರರು ಜಾಗೃತರಾಗಬೇಕು: ಸಲೀಂ ಗುರುವಾಯನಕರೆ

Suddi Udaya

ಕೊಕ್ಕಡ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಖೋ ಖೋ ಕ್ರೀಡಾ ಕೂಟದ ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ನಿರ್ದೇಶಕರಾಗಿ ರಕ್ಷಿತ್ ಶಿವರಾಂ ಆಯ್ಕೆ

Suddi Udaya

ಎ.22: ಸಾವ್ಯದಲ್ಲಿ 12 ನೇ ವರ್ಷದ ಸಾಮೂಹಿಕ ಶ್ರೀ ಶನಿಪೂಜೆ

Suddi Udaya
error: Content is protected !!