April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಸುರೇಶ್ ಅವರಿಗೆ  ಬೀಳ್ಕೊಡುಗೆ

ಬೆಳ್ತಂಗಡಿ : ಬೆಳ್ತಂಗಡಿಯ ಸರ್ಕಾರಿ  ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಶಾಲೆಯ ನಿಕಟ ಪೂರ್ವ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ  ಮಚ್ಚಿನ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿರುವ ಸುರೇಶ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಶಾಲಾಭಿವೃದ್ಧಿ ಸಮಿತಿ ಸರ್ವಸದಸ್ಯರು  ಮತ್ತು ಶಾಲಾ ಪೋಷಕರ ವತಿಯಿಂದ ನಡೆಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ  ಅಧ್ಯಕ್ಷ ನೀನಾಕುಮಾರ್  ವಹಿಸಿದ್ದರು. ಅತಿಥಿಗಳಾಗಿ ಬೆಳ್ತಂಗಡಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ನಿವೃತ್ತ ಸಮನ್ವಯಾ ಧಿಕಾರಿ ಗಣೇಶ್ ಐತಾಳ್  ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಿಯಾಜ್ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ  ಕಿರಣ್ ಕುಮಾರ್ ಶೆಟ್ಟಿ ಹಾಗೂ ಶಾಲಾ ಮುಖ್ಯ ಶಿಕ್ಷಕ ಸೂರ್ಯನಾರಾಯಣ ಪುತ್ತೂರಾಯ ಉಪಸ್ಥಿತರಿದ್ದರು.  

ಶಾಲಾ ಶಿಕ್ಷಕಿ  ಶ್ರೀಮತಿ ವಿದ್ಯಾ ಶೆಣೈ , ಮಾಜಿ ಎಸ್.ಡಿ.ಎಂಸಿ ಅಧ್ಯಕ್ಷ ಜಿನೇಂದ್ರ ಜೈನ್, ವಿದ್ಯಾರ್ಥಿಗಳಾದ ಚೇತನ್ ಮತ್ತು ಸಂಜನಾ ಬೀಳ್ಕೊಡುತ್ತಿರುವ ಶಿಕ್ಷಕರ ಬಗ್ಗೆ ತಮ್ಮ ಅನಿಸಿಕೆಗಳನ್ನು  ಹಂಚಿಕೊಂಡರು. ಅತಿಥಿಗಳೀರ್ವರು  ಸುರೇಶ್ ರವರ ಬಗ್ಗೆ ಮೆಚ್ಚುಗೆಯ ಮಾತನಾಡಿ ಸರ್ಕಾರಿ ಶಾಲೆಯ ಬಗ್ಗೆ ಧನಾತ್ಮಕ ಅಂಶಗಳನ್ನು ವ್ಯಕ್ತಪಡಿಸಿದರು. ಶಿಕ್ಷಕಿ ಸವಿತಾ ಸನ್ಮಾನ ಪತ್ರ ವಾಚಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿದಾಯ ಗೀತೆಗಳನ್ನು ಹಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕರು ಸ್ವಾಗತಿಸಿ,  ಹಿರಿಯ ಶಿಕ್ಷಕ ದಿನಕರ್ ನಾಯಕ್ ವಂದನಾರ್ಪಣೆಗೈದು  ಶಿವರಾಂ ಕಾರ್ಯಕ್ರಮ  ನಿರ್ವಹಿಸಿದರು.

Related posts

ಮಚ್ಚಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ

Suddi Udaya

ಸರಕಾರಿ ಬಸ್ಸಿನಲ್ಲೇ ಹೃದಯಾಘಾತವಾಗಿ ಲಾಯಿಲದ ಇಲೆಕ್ಟ್ರೀಷಿಯನ್ ತಾಜ್ ಬಾವುಂಞಿ ನಿಧನ

Suddi Udaya

ಉಜಿರೆ ಪ್ರಾ.ಕೃ.ಪ.ಸ. ಸೇವಾ ಸಂಘದ ಸಿಬ್ಬಂದಿ ಶೇಖರ ಪೂಜಾರಿ ನಿಧನ

Suddi Udaya

ಉಜಿರೆ: ಪೆರ್ಲ ನಿವಾಸಿ ಕೃಷ್ಣಪ್ಪ ಪೂಜಾರಿ ನಿಧನ

Suddi Udaya

ಅಕ್ಷರ ಕಲಿಸುವ ವಿದ್ಯಾ ದೇಗುಲಕ್ಕೆ ಖದೀಮರ ಕನ್ನ, ಕಣಿಯೂರಿನ ಪಿಲಿಗೂಡು ಶಾಲೆ ಬೀಗ ಒಡೆದು‌ ಕಳ್ಳತನ:

Suddi Udaya

ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ಕೊಯ್ಯೂರು ಮಲೆಬೆಟ್ಟು ನಿವಾಸಿ ಅಮೃತೇಶ್‌ ರಿಗೆ ರೂ.19.90 ಲಕ್ಷ ವಂಚನೆ

Suddi Udaya
error: Content is protected !!