ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್, ಗುರುವಾಯನಕೆರೆ, ಎಸ್. ಡಿ. ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ (ರಿ )ಗುರುವಾಯನಕೆರೆ, ಕುಲಾಲ-ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು, ಪ್ರಗತಿ ಬಂಧು, ಜ್ಞಾನವಿಕಾಸ, ಸ್ವ ಸಹಾಯಸಂಘಗಳ ಒಕ್ಕೂಟ ಗುರುವಾಯನಕೆರೆ ಇವರ ಸಹಕಾರದೊಂದಿಗೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದನ್ವಯ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆ.10 ರಂದು ಕುಲಾಲ ಭವನದಲ್ಲಿ ನಡೆಯಿತು.
ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿಯವರು ದೀಪಾ ಬೆಳಗಿಸಿ ಉದ್ಘಾಟಿಸಿ, ಪ್ರಸ್ತುತ ದಿನಗಳಲ್ಲಿ ಇರುವ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಒತ್ತಡದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಮಾರಣಾಂತಿಕ ಕಾಯಿಲೆ ಬಲಿಯಾಗುತ್ತಿದ್ದಾರೆ. ಆದರಿಂದ ರೋಗ ಬರುವ ಮೊದಲು ಎಚ್ಚೆತ್ತುಕೊಳ್ಳಿ ಎಂದರು.
ಎಸ್‌ಡಿಎಂ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಧಿಕಾರಿ ಚಿದಾನಂದರವರು ತಮ್ಮ ಆಸ್ಪತ್ರೆಯಲ್ಲಿರುವ ಸಾಲಭ್ಯಗಳ ಮಾಹಿತಿ ನೀಡಿದರು.
ಮುಖ್ಯ ಅತಿಥಿ ಗಳಾಗಿ ವಾಣಿಜ್ಯ ತೆರಿಗಾಧಿಕಾರಿ ಯತೀಶ್ ಸಿರಿಮಜಲು, ಡಾ| ಸುಭಾಷ್ ನೇತ್ರ ತಜ್ಜರು, ಡಾ| ಜಾಸ್ಟಿನ್, ಕಿವಿ ಮೂಗು ಡೆಂಟಲ್ ಸ್ಪೆಷಲಿಸ್ಟ್, ಡಾ| ಶ್ರವಣ್ ದೀಕ್ಷಿತ್, ವಲಯಾಧ್ಯಕ್ಷ ಚಾಮರಾಜ, ಒಕ್ಕೂಟ ಅಧ್ಯಕ್ಷ ನಾಗೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜರವರು ವಹಿಸಿದ್ದರು.
ಜ್ಞಾನವಿಕಾಸ ಸಮನ್ವಯಧಿಕಾರಿ ಹರಿಣಿ ಕಾರ್ಯಕ್ರಮ ನಿರೂಪಿಸಿದವರು. ಪವಿತ್ರಾ ಪ್ರಾರ್ಥಿಸಿದರು. ಪ್ರತಿಭಾ, ಪೆಲಿಸಿಟ್ಟಾ ಸ್ವಾಗತಿಸಿ, ವಲಯ ಮೇಲ್ವಿಚಾರಕರಾದ ಅಚ್ಚುತ ಧನ್ಯವಾದವಿತ್ತರು.