24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿ

ನಾರಾವಿ-ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಸಚಿವ ಗುಂಡೂರಾವ್ ಚಾಲನೆ

ಬೆಳ್ತಂಗಡಿ: ಒಂದು ತಿಂಗಳ ಹಿಂದೆ ಮಂಜೂರುಗೊಂಡ ನಾರಾವಿ- ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ಸಿಗೆ ಸೆ.11ರಂದು ಅಳದಂಗಡಿಯಲ್ಲಿ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.


ಬಳಿಕ ನಮನ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಸರಕಾರದ ಸೌಲಭ್ಯಗಳು ಜನರಿಗೆ ನೇರವಾಗಿ ತಲುಪಬೇಕು, ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಸೌಲಭ್ಯವಿದ್ದು, ಸ್ವಾತಂತ್ರ್ಯ ಬಂದ ಬಳಿಕ ಇದುವರೆಗೆ ಆಗದ ಬಸ್ಸಿನ ವ್ಯವಸ್ಥೆ ಈ ಪ್ರದೇಶಕ್ಕೆ ಸರಕಾರ ಮಾಡಿದೆ ಎಂದು ತಿಳಿಸಿದರು.


ಮಾಜಿ ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ನಾಗೇಶ್ ಕುಮಾರ್, ಮನಪಾ ಸದಸ್ಯ ಎ.ಸಿ.ವಿನಯ್ ರಾಜ್, ಜಿ.ಪಂ. ಮಾಜಿ ಸದಸ್ಯರಾದ ಸಾಹುಲ್ ಹಮೀದ್, ಶೇಖರ್ ಕುಕ್ಕೇಡಿ, ಧರಣೇಂದ್ರ ಕುಮಾರ್, ನಮಿತಾ ಪೂಜಾರಿ, ಗ್ರಾಮೀಣ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ, ಪ್ರಮುಖರಾದ ಪ್ರಶಾಂತ್ ವೇಗಸ್, ಸಂಜೀವ ಪೂಜಾರಿ, ವೀರೇಂದ್ರ ಜೈನ್, ಈಶ್ವರ ಭಟ್ ಎಂ. ಸೆಬಾಸ್ಟಿನ್ ಕಳೆಂಜ, ಯೋಗೀಶ್ ಅಳಕೆ, ರವಿಕೋಟ್ಯಾನ್, ಸಲೀಂ ಜಿ.ಕೆರೆ, ಅಭಿನಂದನ್ ಹರೀಶ್ ಕುಮಾರ್, ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಜಯಕರ ಶೆಟ್ಟಿ, ವಿಭಾಗೀಯ ಸಂಚಾರ ಅಧಿಕಾರಿ ಕೆ.ಮುರಳೀಧರ್ ಆಚಾರ್ಯ, ಧರ್ಮಸ್ಥಳ ಡಿಪ್ಪೋ ಮ್ಯಾನೇಜರ್ ಉದಯ್ ಶೆಟ್ಟಿ ಉಪಸ್ಥಿತರಿದ್ದರು.

ದೇವಿಪ್ರಸಾದ್ ಶೆಟ್ಟಿ ಅಳದಂಗಡಿ ಸ್ವಾಗತಿಸಿದರು. ತಾ.ಪಂ. ಸಂಯೋಜಕ ಜಯಾನಂದ್ ನಿರೂಪಿಸಿದರು. ಸುಭಾಶ್ಚಂದ್ರ ರೈ ಅಳದಂಗಡಿ ವಂದಿಸಿದರು.

Related posts

ನಿಡ್ಲೆ ಗ್ರಾ.ಪಂ. ನ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ನೀಲೇಶ್ವರದ ತಂತ್ರಿವರ್ಯರಾದ ಉಚ್ಚಿಲ ಪದ್ಮನಾಭ ತಂತ್ರಿಗಳ ಭೇಟಿ

Suddi Udaya

ಬೆಳ್ತಂಗಡಿ: ನಾಟಿ ವೈದ್ಯ ಬಾಬು ಆಚಾರ್ಯ ರವರಿಗೆ ಸನ್ಮಾನ

Suddi Udaya

ಕಡಿರುದ್ಯಾವರ ಗ್ರಾಮ ಪಂಚಾಯತಿನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya

ಪಣೆಜಾಲು- ಗುಂಪಲಾಜೆ ಶ್ರೀ ನಾಗ-ರಕ್ತೇಶ್ವರಿ ಹಾಗೂ ಪರಿವಾರ ದೈವಗಳಿಗೆ ದೇವಸ್ಥಾನ, ಕಟ್ಟೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇಗುಲದ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆ

Suddi Udaya
error: Content is protected !!