27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ:ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಕಲಾ ಸಿಂಧು ಸಾಂಸ್ಕೃತಿಕ ಸಂಘದ ವತಿಯಿಂದ ‘ವೃಕ್ಷಾಬಂಧನ’ ಕಾರ್ಯಕ್ರಮ

ಉಜಿರೆ: ಪ್ರಕೃತಿಯೊಂದಿಗಿನ ಮನುಜರ ಬಾಂಧವ್ಯದ ಸಂಕೇತವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಮರಕ್ಕೆ ರಾಖಿ ಕಟ್ಟುವುದು ಉತ್ತಮ ಕಾರ್ಯ. ಪರಿಸರವನ್ನು ಉಳಿಸುವ ಮತ್ತು ಪೋಷಿಸುವ ಕಾರ್ಯ ನಮ್ಮದಾಗಿದೆ. ಮಾನವರು ಮತ್ತು ನೈಸರ್ಗಿಕ ಪ್ರಪಂಚದ ನಡುವಿನ ಸಂಬಂಧದ ಬಗ್ಗೆ ವಿದ್ಯಾರ್ಥಿಗಳ ತಿಳುವಳಿಕೆಯನ್ನು ಈ ವೃಕ್ಷಾಬಂಧನ ಕಟ್ಟುವ ಕಾರ್ಯ ಸುಂದರವಾಗಿ ಪ್ರತಿಬಿಂಬಿಸಿದೆ” ಎಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆಯ ವಿಜ್ಞಾನ ಶಿಕ್ಷಕಿ ರೂಪಶ್ರೀ ಹೇಳಿದರು.

ಅವರು ಸೆ.11 ರಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಇಲ್ಲಿ ಕಲಾ ಸಿಂಧು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ‘ವೃಕ್ಷಾಬಂಧನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಾವೇ ತಯಾರು ಮಾಡಿದ ಪರಿಸರಸ್ನೇಹಿ ರಾಖಿಯನ್ನು ಗಿಡಗಳಿಗೆ ಕಟ್ಟಿ ವೃಕ್ಷ ಸಂರಕ್ಷಣೆ ಪ್ರತಿಜ್ಞೆ ಮಾಡಿದರು.

ವಿದ್ಯಾರ್ಥಿನಿ ಅಹಲ್ಯ ಪರಿಸರ ಭಾವಗೀತೆಯನ್ನು ಹಾಡಿದರು. ವಿದ್ಯಾರ್ಥಿನಿ ರಿತಿಕಾ ವೃಕ್ಷಾಬಂಧನದ ಮಹತ್ವ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯಕ್ ವಹಿಸಿದ್ದರು.

ವೇದಿಕೆಯಲ್ಲಿ ಕಲಾ ಸಂಘದ ಸಂಯೋಜಕ ಶಿಕ್ಷಕಿ ಸುಮಾ ಶ್ರೀನಾಥ್, ಕಲಾಸಿಂಧು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ವಿದ್ಯಾರ್ಥಿನಿ ಶ್ರೀಪ್ರಿಯಾ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಚನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅನ್ನಪೂರ್ಣ ಸ್ವಾಗತಿಸಿ, ಸಮೃದ್ಧಿ ವಂದಿಸಿದರು.

Related posts

ಮುಂಡಾಜೆ ಪ. ಪೂ. ಕಾಲೇಜಿನಲ್ಲಿ ಪುನಶ್ಚೇತನ ಕಾರ್ಯಕ್ರಮ

Suddi Udaya

ಉಜಿರೆ: ಸಂತ ಅಂತೋನಿ ಚರ್ಚ್ ನಲ್ಲಿ ಸಂಭ್ರಮದ ತೆನೆ ಹಬ್ಬ

Suddi Udaya

ಅಳದಂಗಡಿ ಪ್ರಾ.ಕೃ.ಪ.ಸ. ಸಂಘದ ಸಿಬ್ಬಂದಿ ಪ್ರಿಯಾ ಡಿಸೋಜಾರಿಗೆ ಬಿಳ್ಕೋಡುಗೆ ಸಮಾರಂಭ

Suddi Udaya

ಅರಸಿನಮಕ್ಕಿ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ: ಕೆಸರ್ ಕoಡೊಡು ಗೌಡೆರೆ ಗೌಜಿ -ಗಮ್ಮತ್ ಕ್ರೀಡಾಕೂಟದಲ್ಲಿ ಮೈರೋಳ್ತಡ್ಕ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಗೆ ಹಲವು ಪ್ರಶಸ್ತಿ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಹಾಗೂ ಗ್ರಾಮೀಣ ವತಿಯಿಂದ ದಿ. ಕೆ. ವಸಂತ ಬಂಗೇರ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ

Suddi Udaya
error: Content is protected !!