ಬೆಳ್ತಂಗಡಿ: ಹಾಲು ಉತ್ಪಾದಕ ಒಕ್ಕೂಟದ ಮೂಲಕ ಸದಸ್ಯರಿಗೆ ಅನೇಕ ಅನುಕೂಲತೆಗಳನ್ನು ಕಲ್ಪಿಸಲಾಗಿದ್ದು ಅದರ ಪ್ರಯೋಜನ ಪಡೆದು, ಗುಣಮಟ್ಟದ ಹಾಲು ಪೂರೈಕೆಯಾಗುವತ್ತ ಗಮನಹರಿಸಬೇಕು ಎಂದು ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸುಚಿತ್ರಾ ಹೇಳಿದರು.
ಅವರು ಸೆ.12 ರಂದು ಸೂಳಬೆಟ್ಟು ಹಾಲು ಉತ್ಪಾದಕ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಒಕ್ಕೂಟದ ಮಿನಿ ಡೈರಿ, ನಂದಿನಿ ಸಮೃದ್ಧಿ, ಹೆಣ್ಣುಕರು ಸಾಕಾಣೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ವರದಿ ಸಾಲಿನಲ್ಲಿ ರೂ. 79,63,897 ಮೊತ್ತದ ಹಾಲನ್ನು ಸಂಗ್ರಹಿಸಲಾಗಿದ್ದು ರೂ.83,39,248 ಮೊತ್ತದಲ್ಲಿ ಒಕ್ಕೂಟಕ್ಕೆ ಹಾಗೂ ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ರೂ.1,45,326 ರಷ್ಟು ಲಾಭ ಬಂದಿರುವುದನ್ನು ಸಭೆಯಲ್ಲಿ ತಿಳಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಿರಂಜನ ಜೋಶಿ ಅವರು ಹಾಲು ಸಂಗ್ರಹ ಹೆಚ್ಚಾಗುವಂತೆ ಎಲ್ಲರೂ ಶ್ರಮಿಸುವಂತೆ ವಿನಂತಿಸಿದರು.
ಹೆಚ್ಚು ಹಾಲು ಪೂರೈಸುತ್ತಿರುವ ಬೇಬಿ ಪೂಜಾರಿ, ರವಿ ಪೂಜಾರಿ, ಹರೀಶ್ ಮಡಿವಾಳ ಅವರಿಗೆ ಬಹುಮಾನ ನೀಡಲಾಯಿತು. ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಲಾಯಿತು.
ಸಂಘದ ನಿರ್ದೇಶಕರುಗಳಾದ ಮೋಹನ ಹೆಗ್ಡೆ, ಹರೀಶ್ ಪೂಜಾರಿ, ಪ್ರಮೋದ ಪೂಜಾರಿ, ಜಗನ್ನಾಥ, ಆನಂದ ಪೂಜಾರಿ, ಸುಶೀಲಾ, ರೀಟಾ ಡಿ ಸೋಜ, ಆನಂದ ಪ್ರಕಾಶ ಕುಟಿನ್ಹಾ, ಹರೀಶ್ ಮಡಿವಾಳ, ಹಾಲು ಪರೀಕ್ಷಕಿ ಸುಜಾತಾ ಇದ್ದರು.
ಕಾರ್ಯನಿರ್ವಹಣಾಧಿಕಾರಿ ಚೈತ್ರಾ ಸ್ವಾಗತಿಸಿ, ವರದಿ ಮಂಡಿಸಿದರು. ಉಪಾಧ್ಯಕ್ಷೆ ವನಿತಾ ವಂದಿಸಿದರು.