ಉಜಿರೆ: ಪ್ರಕೃತಿಯೊಂದಿಗಿನ ಮನುಜರ ಬಾಂಧವ್ಯದ ಸಂಕೇತವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಮರಕ್ಕೆ ರಾಖಿ ಕಟ್ಟುವುದು ಉತ್ತಮ ಕಾರ್ಯ. ಪರಿಸರವನ್ನು ಉಳಿಸುವ ಮತ್ತು ಪೋಷಿಸುವ ಕಾರ್ಯ ನಮ್ಮದಾಗಿದೆ. ಮಾನವರು ಮತ್ತು ನೈಸರ್ಗಿಕ ಪ್ರಪಂಚದ ನಡುವಿನ ಸಂಬಂಧದ ಬಗ್ಗೆ ವಿದ್ಯಾರ್ಥಿಗಳ ತಿಳುವಳಿಕೆಯನ್ನು ಈ ವೃಕ್ಷಾಬಂಧನ ಕಟ್ಟುವ ಕಾರ್ಯ ಸುಂದರವಾಗಿ ಪ್ರತಿಬಿಂಬಿಸಿದೆ” ಎಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆಯ ವಿಜ್ಞಾನ ಶಿಕ್ಷಕಿ ರೂಪಶ್ರೀ ಹೇಳಿದರು.
ಅವರು ಸೆ.11 ರಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಇಲ್ಲಿ ಕಲಾ ಸಿಂಧು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ‘ವೃಕ್ಷಾಬಂಧನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಾವೇ ತಯಾರು ಮಾಡಿದ ಪರಿಸರಸ್ನೇಹಿ ರಾಖಿಯನ್ನು ಗಿಡಗಳಿಗೆ ಕಟ್ಟಿ ವೃಕ್ಷ ಸಂರಕ್ಷಣೆ ಪ್ರತಿಜ್ಞೆ ಮಾಡಿದರು.
ವಿದ್ಯಾರ್ಥಿನಿ ಅಹಲ್ಯ ಪರಿಸರ ಭಾವಗೀತೆಯನ್ನು ಹಾಡಿದರು. ವಿದ್ಯಾರ್ಥಿನಿ ರಿತಿಕಾ ವೃಕ್ಷಾಬಂಧನದ ಮಹತ್ವ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯಕ್ ವಹಿಸಿದ್ದರು.
ವೇದಿಕೆಯಲ್ಲಿ ಕಲಾ ಸಂಘದ ಸಂಯೋಜಕ ಶಿಕ್ಷಕಿ ಸುಮಾ ಶ್ರೀನಾಥ್, ಕಲಾಸಿಂಧು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ವಿದ್ಯಾರ್ಥಿನಿ ಶ್ರೀಪ್ರಿಯಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಚನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅನ್ನಪೂರ್ಣ ಸ್ವಾಗತಿಸಿ, ಸಮೃದ್ಧಿ ವಂದಿಸಿದರು.