ನಡ: ಪಡ್ಪು ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ವಾರ್ಷಿಕ ಸಾಮಾನ್ಯ ಸಭೆಯು ಸೆ.12ರಂದು ಸಂಘದ ವಠಾರದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರವೀಣ್ ವಿ.ಜಿ ವಹಿಸಿದ್ದರು. ವಿಸ್ತರಣಾಧಿಕಾರಿ ಯಮುನಾ ಉಪಸ್ಥಿತರಿದ್ದರು. ಸಂಘವು ರೂ. 4,56,947.15 ಲಾಭ ಬಂದಿದ್ದು, ಸಂಘದ ಸದಸ್ಯರಿಗೆ ಒಟ್ಟು ರೂ. 2,18,300 ಬೋನಸ್ ವಿತರಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಪಡೆದ 7 ಸದಸ್ಯರ ಮಕ್ಕಳಿಗೆ ಸಹಾಯಧನ ವಿತರಿಸಲಾಯಿತು. ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿ ಪ್ರಥಮ ಸ್ಥಾನ ಪಡೆದ ಪ್ರವೀಣ್ ವಿ.ಜಿ, ದ್ವಿತೀಯ ದಿವಾಕರ ಸಾಲ್ಯಾನ್, ತೃತೀಯ ಆಶ್ರಯ ಅಜ್ರಿ ಮೂಡಬೆಟ್ಟು ಇವರುಗಳನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ನಾಭಿರಾಜ ಜೈನ್, ದಿವಾಕರ ಸಾಲ್ಯಾನ್, ದೇಜಪ್ಪ ಶೆಟ್ಟಿ, ಪುರುಷೋತ್ತಮ ಗೌಡ, ಬೇಬಿ ಶೆಟ್ಟಿ, ಕೃಷ್ಣಪ್ಪ ಗೌಡ, ಸುಂದರ ನಾಕ್, ಸಂತೋಷ್ ಸುರ್ಯ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಶಾಂತಿ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಸುಮಿತ್ರ ಶೆಟ್ಟಿ ಸ್ವಾಗತಿಸಿ, ನಿರ್ದೇಶಕಿ ಸುಲತಾ ಶೆಟ್ಟಿ ಧನ್ಯವಾದವಿತ್ತರು.