April 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಗ್ರಾ.ಪಂ. ನಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿ ಮುಂಡಾಜೆ ಕಾರ್ಯಕ್ಷೇತ್ರದ ನಂದಿನಿ ಜ್ಞಾನವಿಕಾಸ ಕೇಂದ್ರದಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರವನ್ನು ಮುಂಡಾಜೆ ಗ್ರಾಮಪಂಚಾಯತ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಜನಜಾಗೃತಿ ವಲಯಾಧ್ಯಕ್ಷ ನಾಮದೇವ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ರುಡ್ ಸೆಟ್ ಸಂಸ್ಥೆಯ ಪ್ರವೀಣ್ ರವರು ಸ್ವಉದ್ಯೋಗ ಪ್ರಾರಂಭಿಸುವ ಮುನ್ನ ಅನುಸರಿಸಬೇಕಾದ ಪೂರ್ವ ತಯಾರಿಗಳಾದ ಸ್ಥಳದ ಆಯ್ಕೆ, ಪಡೆಯಬೇಕಾದ ಲೈಸೆನ್ಸ್, ಬಂಡವಾಳ, ಮಾರ್ಕೆಟಿಂಗ್ ಬಗ್ಗೆ ವಿವರವಾಗಿ ತಿಳಿಸಿದರು. ಸ್ವಉದ್ಯೋಗ ಮಾಡಬಹುದಾದಂತಹ ಬತ್ತಿ ತಯಾರಿ, ಹಾಳೆ ತಟ್ಟೆ ಘಟಕ, ಅಗರಬತ್ತಿ ತಯಾರಿ, ಅಣಬೆ ಕೃಷಿ, ಜೈವಿಕ ಗೊಬ್ಬರ ತಯಾರಿ, ಟೈಲರಿಂಗ್ , ಬ್ಯೂಟೀಷಿಯನ್ ,ನರ್ಸರಿ ,ಜೇನುಕೃಷಿ, ಹೈನುಗಾರಿಕೆ ,ಕೋಳಿಸಾಕಣೆ, ಮಸಾಲೆ ಪೌಡರ್ ತಯಾರಿ, ವ್ಯಾಪಾರ ಮಾಡುವ ಬಗ್ಗೆ ಪ್ರೇರಣೆ ನೀಡಿದರು.

ಗ್ರಾಮಪಂಚಾಯತ್ ಅಧ್ಯಕ್ಷರಾದ ಗಣೇಶ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಮಧುರಾ ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಮೊಬೈಲ್ ರಿಟೇಲರ್ ಅಸೋಸಿಯೇಷನ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ಪ್ರೇರಣಾ ತರಗತಿ

Suddi Udaya

ಕೆ. ವಸಂತ ಬಂಗೇರ ನಿಧನಕ್ಕೆ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಹಾಗೂ ಬಿಷಪ್ ಲಾರೆನ್ಸ್ ಮುಕ್ಕುಯಿ ರವರಿಂದ ಅಂತಿಮ ನಮನ

Suddi Udaya

ಮದ್ದಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಗೋಪಾಲ ಶೆಟ್ಟಿ, ಉಪಾಧ್ಯಕ್ಷರಾಗಿ ವಿವೇಕಾನಂದ ಸಾಲ್ಯಾನ್

Suddi Udaya

ಉಜಿರೆ: ರತ್ನಮಾನಸ ಜೀವನ ಶಿಕ್ಷಣ ವಸತಿ ನಿಲಯದಲ್ಲಿ ಭೂಮಿ ಹುಣ್ಣಿಮೆ ಆಚರಣೆ

Suddi Udaya

ಕಟೀಲ್ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಗರ್ಡಾಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಿಂದ ಸುಮಾರು 30 ಭಕ್ತರಿಂದ ಪಾದಯಾತ್ರೆ

Suddi Udaya
error: Content is protected !!