ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.13ರಂದು ಬೆಳ್ತಂಗಡಿ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಸಭಾಭವನದಲ್ಲಿ ಜರುಗಿತು.
ಸಂಘದ ಅಧ್ಯಕ್ಷರಾದ ಅಜಿತ್ ಆರಿಗರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ವರ್ಷ ರೂ. 1.43 ಕೋಟಿ ವ್ಯವಹಾರ, ರೂ. 54.22 ಲಕ್ಷ ನಿವ್ವಳ ಲಾಭ ಗಳಿಸಿದ್ದು ಶೇ 12 ಡಿವಿಡೆಂಟ್ ಘೋಷಿಸಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಅತಿ ಹೆಚ್ಚು ಪಿಗ್ಮಿ ಸಂಗ್ರಹಕರಾದ ರಾಮದೇವಿ, ಪ್ರೇಮರವರನ್ನು ಹಾಗೂ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತ್ತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸಾದ್ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಗಣೇಶ್ ಭಂಡಾರಿ, ನಿರ್ದೇಶಕರುಗಳಾದ ಮುನಿರಾಜ್ ಅಜ್ರಿ, ಪುರಂದರ, ರಾಧಾ, ನಾರಾಯಣ ಆಚಾರ್, ಅಶೋಕ್ ರೈ. ಶ್ರೀನಾಥ್ ಕೆ.ಎಮ್, ತಿಮ್ಮಯ್ಯ ನಾಯ್ಕ, ರಮೇಶ್ ನಲ್ಕೆ, ಹರಿಯಪ್ಪ ನಾಯ್ಕ್, ಪ್ರೇಮ., ಡಿ.ಸಿ.ಸಿ. ಪ್ರತಿನಿಧಿ ಸಂದೇಶ್, ಸಂಘದ ಸದಸ್ಯರು, ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಗಣೇಶ್ ಸ್ವಾಗತಿಸಿ ನಿರ್ದೇಶಕರಾದ ಶ್ರೀನಾಥ್ ಕೆ.ಎಮ್. ಧನ್ಯವಾದವಿತ್ತರು.