September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಹೊಸಂಗಡಿ: ಪೆರಿಂಜೆ ನಿವಾಸಿ ಸುಂದರ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 4 ರಂದು ನಡೆದಿದೆ.

ಹೊಸಂಗಡಿ ಗ್ರಾಮದ ಪಡ್ಯಾರಬೆಟ್ಟು ಸಮೀಪದ ಪೆರಿಂಜೆ ನಿವಾಸಿ ಸುಂದರ (41ವ) ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.

ಇವರು ಕಳೆದ ಕೆಲವು ಸಮಯದಿಂದ ಮಾನಸಿಕ ಖಿನ್ನತೆಗೆ ಸಂಬಂಧಿಸಿ ಚಿಕಿತ್ಸೆ ಪಡೆಯುತ್ತಿದ್ದು ಇತ್ತೀಚಿಗೆ ಕೆಲವು ದಿನಗಳಿಂದ ಕಸಬಾ ಗ್ರಾಮದ ರೆಂಕೆದಗುತ್ತುವಿನಲ್ಲಿರುವ ತನ್ನ ಸಹೋದರಿ ಶೋಭಾ ಎಂಬವರ ಮನೆಯಲ್ಲಿದ್ದು ಚಿಕಿತ್ಸೆಗಾಗಿ ಬಂಟ್ವಾಳಕ್ಕೆ ಹೋಗಿ ಬರುತ್ತಿದ್ದರು. ಸಹೋದರಿಯ ಮನೆಯಲ್ಲಿ ಮಂಗಳವಾರ ರಾತ್ರಿ ಊಟ ಮಾಡಿ, ಸುಮಾರು 11 ಗಂಟೆ ಹೊತ್ತಿಗೆ ಮಲಗಿದ್ದ ಸುಂದರ ತಮ್ಮ ಚಿಕಿತ್ಸೆ ಗುಣಮುಖರಾಗದೆ ಮನನೊಂದು ಡಿ.4 ರಂದು ಮನೆಯ ಹಿಂಭಾಗದಲ್ಲಿ ಬಾತ್ ರೂಮ್ ನ ಪಕ್ಕಾಸ್ ಒಂದಕ್ಕೆ ತನ್ನ ಲುಂಗಿಯಿಂದಲೇ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬೆಂಗಳೂರು ಬಿಲ್ಲವ ಅಸೋಸಿಯೇಷನ್ ನಿಂದ ಪೀತಾಂಬರ ಹೆರಾಜೆ ಅವರಿಗೆ ಅಭಿನಂದನೆ

Suddi Udaya

ಬಿಜೆಪಿ ಶಿರ್ಲಾಲು ಬೂತ್ ಸಂಖ್ಯೆ 9ರ ಅಧ್ಯಕ್ಷರಾಗಿ ವಿಜಯಕುಮಾರ್, ಕಾರ್ಯದರ್ಶಿಯಾಗಿ ರಮೇಶ್ ಎನ್ ಆಯ್ಕೆ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನ ಪ್ರಶಸ್ತಿಯ ಗೌರವ

Suddi Udaya

ಗುಂಡು ಎಸೆತ ಸ್ಪರ್ಧೆ : ಲಾಯಿಲ ದೀಪಾಲ್ ಕೆ.ಆರ್., ಪ್ರಥಮ ಸ್ಥಾನ

Suddi Udaya

ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಮೋದಿಜೀ ರವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

Suddi Udaya

ಕಾಶಿಪಟ್ಣ: ಸರಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

Suddi Udaya
error: Content is protected !!