23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ: ಶಾಲೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

ಕೊಕ್ಕಡ: ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಜೇಸಿ ಸಪ್ತಾಹದ ಅಂಗವಾಗಿ ಶಾಲೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಸೆ.14 ರಂದು ವೈಯಕ್ತಿಕ ಸ್ವಚ್ಛತೆ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಹತ್ಯಡ್ಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಇರುವ ಶಾಲೆತ್ತಡ್ಕ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ
ರೇಖಾ ಅವರು ಮಕ್ಕಳಿಗೆ ಹಲ್ಲು, ಬಾಯಿ ಹಾಗೂ ವೈಯಕ್ತಿಕ ಸ್ವಚ್ಛತೆ ಕುರಿತು ತರಬೇತಿ ನೀಡಿದರು.

ತರಬೇತಿ ವಿಭಾಗದ ಉಪಾಧ್ಯಕ್ಷ ವಿದ್ಯೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು.

ಅಕ್ಷತ್ ರೈ ಜೇಸಿ ವಾಣಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷ ಕೆ. ಶ್ರೀಧರ ರಾವ್ ಅವರು ಅತಿಥಿಗಳನ್ನು ಪರಿಚಯಿಸಿದರು.

ಎಲ್ಲಾ ಮಕ್ಕಳಿಗೂ ಹಲ್ಲು ಉಜ್ಜುವ ಬ್ರಷ್, ಪೇಸ್ಟ್ ವಿತರಿಸಲಾಯಿತು. ಅತಿಥಿ ಹಾಗೂ ಕೇಂದ್ರಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ನಿಖಿತಾ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಸುಜಾತ,
ಜೋಸೆಫ್ ಪಿರೇರಾ, ಸೌಜನ್ಯ, ಯಶೋಧ, ಭಾರತಿ, ದೇವಪ್ಪ ಪೂಜಾರಿ, ಜಯಚಂದ್ರ ಬಲ್ಕಜೆ, ಪಿ.ಟಿ. ಸೆಬಾಸ್ಟಿಯನ್, ಪೋಷಕರು ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಅಂಗನವಾಡಿ ಕೇಂದ್ರದ ಸಹಾಯಕಿ ಶ್ರೀಮತಿ ವಿಜಯಾ ವಂದಿಸಿದರು.

Related posts

ಬಾರ್ಯ ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

Suddi Udaya

ನಾರಾವಿ ವಲಯದ ಭಜನಾ ಪರಿಷತ್ತಿನ ಪದಾಧಿಕಾರಿಗಳ ಆಯ್ಕೆ

Suddi Udaya

ಮೊಗ್ರು: ಕಡಮ್ಮಾಜೆ ಫಾರ್ಮ್ ನಲ್ಲಿ 3ನೇ ವರ್ಷದ ಜೇನು ಕೃಷಿ ಮಾಹಿತಿ ಶಿಬಿರ

Suddi Udaya

ಪ್ರಕೃತಿ ವಿಸ್ಮಯ: ಕಡಿದ ಬಾಳೆಗಿಡದಲ್ಲಿ ಹೂ ಬಿಟ್ಟ ಬಾಳೆ ಗೊನೆ

Suddi Udaya

ಶಿರ್ಲಾಲು: ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದ ಕಲಾಮಂಟಪಕ್ಕೆ ಶಿಲಾನ್ಯಾಸ

Suddi Udaya
error: Content is protected !!