April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಧರ್ಮಸ್ಥಳ: ಮಹಿಳಾ ಆರೋಗ್ಯ ಮತ್ತು ನ್ಯಾಚುರೋಪತಿ ಉದ್ಘಾಟನೆ

ಧರ್ಮಸ್ಥಳ: ಕಾಲ ಬದಲಾಗಿದೆ. ಜೀವನಶೈಲಿ ಬದಲಾಗಿದೆ. ಆಹಾರ ಪದ್ಧತಿ ಬದಲಾಗಿದೆ. ಇವೆಲ್ಲದರ ಜೊತೆಗೆ ಮನುಷ್ಯನಲ್ಲಿ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ಮನುಷ್ಯ ಊಟದಷ್ಟು ಔಷಧಿಗಳು ಔಷಧಿಯ ಪ್ರಮಾಣದಷ್ಟು ಊಟವನ್ನೂ ಮಾಡುವ ಪರಿಸ್ಥಿತಿಯಿದೆ. ಬದಲಾದ ಜೀವನಶೈಲಿಯಿಂದ ಉಂಟಾಗಿರುವ ಆರೋಗ್ಯ ತೊಂದರೆಗಳಿಗೆ ಪ್ರಕೃತಿ ಚಿಕಿತ್ಸೆ ಅತ್ಯುತ್ತಮ ಪರಿಹಾರವಾಗಿದೆ. ಪ್ರಕೃತಿ ಚಿಕಿತ್ಸೆ ನಮ್ಮ ಜೀವನಕ್ಕೆ ತುಂಬಾ ಹತ್ತಿರ ಇರುವ ಒಂದು ಚಿಕಿತ್ಸೆ. ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನ ಕಾಲೇಜಿನ ಉಪ-ಪ್ರಾಂಶುಪಾಲರಾದ ಶ್ರೀಮತಿ ಡಾ.ಸುಜಾತರವರು ಮಹಿಳಾ ಆರೋಗ್ಯ ಮತ್ತು ನ್ಯಾಚುರೋಪತಿ ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಪಂಚ ಮಹಾಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ ಇದರ ತತ್ವಗಳನ್ನು ಆಧಾರವಾಗಿಟ್ಟುಕೊಂಡು ನೀಡುವ ಚಿಕಿತ್ಸೆ ಪ್ರಕೃತಿ ಚಿಕಿತ್ಸೆ ಇದು ಅತ್ಯಂತ ಸುಲಭವಾಗಿ ಸಿಗುವ ಹಾಗೂ ನಾವು ಸುಲಭವಾಗಿ ಪಾಲನೆ ಮಾಡಲು ಸಹಕಾರಿಯಾಗುವ ಚಿಕಿತ್ಸೆ. ಉತ್ತಮ ಹಾಗೂ ಮಿತ ಆಹಾರ, ತಾಜಾ ಗಾಳಿ, ವ್ಯಾಯಾಮ, ಬಿಸಿಲು, ಧ್ಯಾನ ಮತ್ತು ಸರಿಯಾದ ಮಾನಸಿಕ ವರ್ತನೆ, ಇವೆಲ್ಲವೂ ದೇಹ ಮತ್ತು ಮನಸ್ಸನ್ನು ಸದೃಢವಾಗಿಡುವಲ್ಲಿ ತಮ್ಮ ಪಾತ್ರವನ್ನು ವಹಿಸುತ್ತವೆ ಎಂದು ಅವರು ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲರಾದ ವಿ ಪ್ರಕಾಶ್ ಕಾಮತ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಶ್ರೀ ಧ.ಮಂ.ಮಹಿಳಾ ಐಟಿಐನ ಬೋಧಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನ ಕಾಲೇಜಿನ ಎಂ.ಡಿ ವಿದ್ಯಾರ್ಥಿನಿಯರಾದ ಡಾ. ಇಂದಿರಾ ಹಾಗೂ ಬಳಗ ಕಾರ್ಯಕ್ರಮ ಆಯೋಜಿಸಿದ್ದು ನಂತರ ಮಹಿಳಾ ಆರೋಗ್ಯದ ಕುರಿತು ಮಾಹಿತಿ ನೀಡಿದರು.

Related posts

ಉಜಿರೆ ಶ್ರೀ. ಧ.ಮಂ. ಆಂ.ಮಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಮಳೆನೀರಿನ ಕೊಯ್ಲು ಪ್ರಾತ್ಯಾಕ್ಷಿತೆ

Suddi Udaya

ಅಳದಂಗಡಿ:ನಿಸ್ವಾರ್ಥ ಸೇವೆಗೆ ಸ್ಪೂರ್ತಿಯ ಸೆಲೆಯಾದ ರವಿಕಟಪಾಡಿ: ಕಿರ್ತನ್ ಅವರ ವೈದ್ಯಕೀಯ ಚಿಕಿತ್ಸೆಗೆ ರೂ.10 ಸಾವಿರ ಹಸ್ತಾಂತರ

Suddi Udaya

ಪುದುವೆಟ್ಟು: ಅಕ್ರಮ ಮರಳು ಅಡ್ಡೆ‌ಗೆ ಧರ್ಮಸ್ಥಳ ಪೊಲೀಸ್ ದಾಳಿ

Suddi Udaya

ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಸಾವು ಪ್ರಕರಣ: ಸೂಕ್ತ ತನಿಖೆ ನಡೆಸಿ ಕ್ರಮಕ್ಕೆ ಅಕ್ಬರ್ ಬೆಳ್ತಂಗಡಿ ಆಗ್ರಹ

Suddi Udaya

ಪಡಂಗಡಿ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ-ಸಾಧಕರಿಗೆ ಗೌರವ ಸನ್ಮಾನ

Suddi Udaya

ರೈಲಿನ ಬೋಗಿಯಲ್ಲಿ ಅನ್ನಪೂರ್ಣ ರಾನಡೆಯವರ ಕೊಲೆ ಪ್ರಕರಣ: ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಕೆ

Suddi Udaya
error: Content is protected !!