27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೋಲಿ ರಿಡೀಮರ್ ಶಾಲಾ ಅಂಗಳದಲ್ಲಿ ಕೆಂಪು ಕಲರವ

ಹೋಲಿ ರಿಡೀಮರ್ ಶಾಲಾ ಪೂರ್ವ ಪ್ರಾಥಮಿಕ ವಿಭಾಗದ ಪುಟಾಣಿ ಮಕ್ಕಳಿಗೆ ಬಣ್ಣಗಳನ್ನು ಪರಿಚಯಿಸಲು ಮತ್ತು ಮಕ್ಕಳನ್ನು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವ ಉದ್ದೇಶದಿಂದ ಸೆಪ್ಟೆಂಬರ್ 13ರಂದು ‘ರೆಡ್ ಡೇ ‘ ದಿನವಾಗಿ ಆಚರಿಸಲಾಯಿತು. ಪುಟಾಣಿ ಮಕ್ಕಳು ಕೆಂಪು ಬಣ್ಣದ ಬಟ್ಟೆ, ಆಭರಣಗಳನ್ನು ತೊಟ್ಟು ಆಕರ್ಷಕವಾಗಿ ಕೆಂಪು ಗುಲಾಬಿಗಳಂತೆ ಮಿನುಗುತ್ತಿದ್ದರು.


ಹಾಗೆಯೇ ಕೆಂಪು ಬಣ್ಣದ ಆಟಿಕೆಗಳು, ಹೂಗಳು, ತರಕಾರಿಗಳು, ಹಣ್ಣುಗಳನ್ನು ಗುರುತಿಸಿ, ಜೋಡಿಸಿ ಸಂತಸಪಟ್ಟರು. ವಿದ್ಯಾರ್ಥಿಗಳಿಗೆ ಅಭಿನಯಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಕೆಂಪು ಬಣ್ಣದ ವಿಶೇಷತೆಯನ್ನು ತಿಳಿಸಿ ಶುಭ ಹಾರೈಸಿದರು. ಸಹಶಿಕ್ಷಕಿಯರಾದ ಶ್ರೀಮತಿ ಶಾಂತಿ ಪಿರೇರಾ, ಶ್ರೀಮತಿ ಅಖೀದಾ ಬಾನು ಹಾಗೂ ಶ್ರೀಮತಿ ಸಂಧ್ಯಾ ಸಹಕರಿಸಿದರು.

Related posts

ಜ.25: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಪಿ.ಯು.ಶಿಕ್ಷಣ : ಭವಿಷ್ಯದ ಅವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮವು

Suddi Udaya

ರಕ್ಷಿತ್ ಶಿವರಾಂ ಅವರ ಮನವಿಗೆ ಅಧಿಕಾರಿಗಳ ಸ್ಪಂದನೆ: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ

Suddi Udaya

ಸುಲ್ಕೇರಿಯಲ್ಲಿ ಭಗವಾನ್ 1008 ಶ್ರೀ ನೇಮಿನಾಥ ಸ್ವಾಮಿ ಬಸದಿ ಧಾಮ ಸಂಪ್ರೋಕ್ಷಣ ಮಹೋತ್ಸವ

Suddi Udaya

ಪಾರ್ಶ್ವ ವಾಯು ಸಮಸ್ಯೆಯಿಂದ ಬಳಲುತ್ತಿರುವ ಮಡಂತ್ಯಾರಿನ ಉಮೇಶ್ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಉಳ್ತೂರಿನಲ್ಲಿ ಶಾಂತಿಯುತ ಬಕ್ರೀದ್ ಆಚರಣೆ

Suddi Udaya

ಸುಲ್ಕೇರಿ ಶ್ರೀ ರಾಮ ಶಾಲೆಗೆ ಶೇ. 100 ಫಲಿತಾಂಶ: ವಿದ್ಯಾರ್ಥಿ ತ್ರಿಷಾ ರಾಜ್ಯಕ್ಕೆ 10 ನೇ ರ್‍ಯಾಂಕ್

Suddi Udaya
error: Content is protected !!