27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮುಂಡಾಜೆ : ಮನೆಯಲ್ಲಿಟ್ಟಿದ್ದ ರೂ.5 ಲಕ್ಷ ಬೆಲೆಬಾಳುವ 122ಗ್ರಾಂ ಚಿನ್ನಾಭರಣ ಕಳವು : ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಮುಂಡಾಜೆ : ಮುಂಡಾಜೆ ನಿವಾಸಿ ಪ್ರಮೋದ್ ವಿ. ಭಿಡೆ ಎಂಬವರ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು ಆದ ಬಗ್ಗೆ ಸೆ.12 ರಂದು ನೀಡದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮೋದ್ ವಿ ಬಿಢೆ ಜು.5 ರಂದು ಮನೆಯ ಸಾರಣೆ ಹಾಗೂ ಪೈಂಟಿಗ್‌ ಕೆಲಸವನ್ನು ಪ್ರಾರಂಭಿಸಿದ್ದು, ಕೆಲಸ ಪ್ರಾರಂಭ ಮಾಡುವ ಮುಂಚಿತವಾಗಿ ಜು 03 ರಂದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು, ಅವರ ಪತ್ನಿ ಮನೆಯ ನೆಲಮಾಳಿಗೆಯಲ್ಲಿ ಇಟ್ಟಿದ್ದರು. ನೆಲಮಾಳಿಗೆಯಲ್ಲಿಟ್ಟಿದ್ದ ಚಿನ್ನಾಭರಣಗಳ ಕೋಣೆಗೆ ಬೀಗ ಹಾಕದೆ ಇದ್ದು, ಮನೆಯ ಕೆಲಸಕ್ಕೆ ಸುಮಾರು 10 ರಿಂದ 13 ಜನ ಕೆಲಸಕ್ಕೆಂದು ಬಂದಿರುತ್ತಾರೆ. ಕೆಲಸ ಮುಗಿಸಿ ಜುಲೈ 19 ರಂದು ತೆರಳಿರುತ್ತಾರೆ. ಸೆ. 12 ರಂದು ಬೆಳಗ್ಗೆ ಪ್ರಮೋದ್ ಬಿಢೆ ಹಾಗೂ ಅವರ ಪತ್ನಿ ಕಾರ್ಯಕ್ರಮಕ್ಕಾಗಿ ಆಭರಣ ಧರಿಸಿಕೊಳ್ಳಲು ಆಭರಣ ಇಟ್ಟಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ, ಅಲ್ಲಿ ಇಡಲಾಗಿದ್ದ ಒಟ್ಟು 122 ಗ್ರಾಂ ಚಿನ್ನಾಭರಣಗಳು ಕಳವಾಗಿರುವುದು ಕಂಡು ಬಂದಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 5 ಲಕ್ಷ ರೂಪಾಯಿಯಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 65/2023 ಕಲಂ: 380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿ ವತಿಯಿಂದ ಆರೋಗ್ಯ ನಿಧಿ ವಿತರಣೆ

Suddi Udaya

ಬದ್ಯಾರ್: ರಸ್ತೆಯಲ್ಲಿ ಬಾಯಿ ತೆರದ ಗುಂಡಿ: ಅಪಾಯದ ಸೂಚನೆ

Suddi Udaya

ಶ್ರೀ ರಾಮ ಕ್ಷೇತ್ರಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಜನಾ ತಂಡದೊಂದಿಗೆ ಭೇಟಿ

Suddi Udaya

ಗುರುವಾಯನಕೆರೆ: ಏಕದಿನ ಶೈಕ್ಷಣಿಕ ಸಮ್ಮೇಳನ ಸಮಾರೋಪ: ಪಠ್ಯಪುಸ್ತಕ ರಚನೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು: ಎಮ್.ಎಲ್.ಸಿ ಭೋಜೇ ಗೌಡ

Suddi Udaya

ನಾವರ: ಡೆಂಗ್ಯೂ ವಿರೋಧ ಮಾಸಾಚರಣೆ ಮನೆ ಮನೆಗೆ ಭೇಟಿ ಹಾಗೂ ಮುಂಜಾಗೃತ ಮಾಹಿತಿ ಕಾರ್ಯಕ್ರಮ

Suddi Udaya

ಬಿಜೆಪಿ ಬೂತ್ ಸಮಿತಿ ಸಾವ್ಯ ಇದರ ನೂತನ ಅಧ್ಯಕ್ಷರಾಗಿ ಶಶಿಧರ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ಜಗದೀಶ್ ಹೆಗ್ಡೆ ಆಯ್ಕೆ

Suddi Udaya
error: Content is protected !!