25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕಾಡಾನೆ ಹಾವಳಿ ಕುರಿತು ಧರ್ಮಸ್ಥಳದಲ್ಲಿ ಅರಣ್ಯಾಧಿಕಾರಿಗಳಿಗೆ ಮನವಿ

ಧರ್ಮಸ್ಥಳ : ಧರ್ಮಸ್ಥಳ ಗ್ರಾಮದ ನೇರ್ತನೆ ಪರಿಸರದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿರುವ ಹಿನ್ನೆಲೆಯಲ್ಲಿ  ಗ್ರಾಮ ಪಂಚಾಯತ್  ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನಾ ಸಭೆ ಸೆ 15 ರಂದು  ಧರ್ಮಸ್ಥಳ ಗ್ರಾಮ ಪಂಚಾಯತು ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್  ನೇರ್ತನೆ ಪರಿಸರದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯ ತುರ್ತಾಗಿ ನಡೆಸಲಾಗುವುದು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ತಕ್ಷಣ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದರು.                                                                     

ನಿರಂತರವಾಗಿ ಆನೆ ದಾಳಿ ನಡೆಸುತ್ತಿರುವ ಅರಣ್ಯದ ಅಂಚಿನಲ್ಲಿರುವ ಪ್ರದೇಶಗಳಲ್ಲಿ ಸೋಲಾರ್ ಬೇಲಿ ಅಳವಡಿಕೆಗೆ ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು. ಸೋಲಾರ್ ಬೇಲಿಗೆ  ಸರಕಾರ ಅನುದಾನ ಒದಗಿಸುತ್ತಿದ್ದು ಅನುದಾನ ಬಂದರೆ ಕೂಡಲೇ  ಅಳವಡಿಸುವುದಾಗಿ  ತಿಳಿಸಿದರು. ಕೃಷಿಕರು ತಾವೇ  ಸ್ವತಹ ಸೋಲಾರ್ ಬೇಲಿ ಅಳವಡಿಸುವುದಿದ್ದರೆ ಅರಣ್ಯ ಇಲಾಖೆಯಿಂದ ಸಹಾಯಧನ ಒದಗಿಸುವುದಾಗಿಯೂ ಮಾಹಿತಿ ನೀಡಿ , ಇಲಾಖೆಯೊಂದಿಗೆ ನಾಗರಿಕರೂ  ಸಹಕರಿಸುವಂತೆ ವಿನಂತಿಸಿದರು.


   ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಕಾಡಾನೆಗಳನ್ನು ಓಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು . ಇದಕ್ಕೆ ಗ್ರಾಮ ಪಂಚಾಯತಿನಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
 ಗ್ರಾಮಸ್ಥರು ಕಾಡಾನೆಗಳು ರಸ್ತೆಯಲ್ಲಿಯೇ ಓಡಾಡುತ್ತಿದ್ದು ಜನರಲ್ಲಿ ಭಯ ಮೂಡಿಸಿದ್ದು ಅಪಾಯಕಾರಿ ಸ್ಥಿತಿ ಇರುವುದರಿಂದ ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು.  ಆನೆಗಳು ಕೃಷಿ ಭೂಮಿಗೆ ಬರದಂತೆ ಆನೆ ಕಂದಕ ನಿರ್ಮಿಸಬೇಕು, ಕಾಡಾನೆಗಳಿಂದ ಕೃಷಿ ಹಾನಿಗೀಡಾದವರಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ವಲಯ ಅರಣ್ಯಾಧಿಕಾರಿಗಳಿಗೆ  ಮನವಿ ಸಲ್ಲಿಸಿದರು.


ಸಭೆಯಲ್ಲಿ ಗ್ರಾಮಪಂಚಾಯತು ಅಧ್ಯಕ್ಷೆ ವಿಮಲ , ಅಭಿವೃದ್ಧಿ ಅಧಿಕಾರಿ ಉಮೇಶ್, ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರೀತಂ ಡಿ, ಗ್ರಾಮ ಪಂಚಾಯತು ಸದಸ್ಯರುಗಳು, ಉಪವಲಯ ಅರಣ್ಯಾಧಿಕಾರಿಗಳಾದ  ಹರಿಪ್ರಸಾದ್, ಯತೀಂದ್ರ  ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜಿನ ಸಹಪ್ರಾಧ್ಯಾಪಕ ಈಶ್ವರ ಗೌಡ ಪಿ. ಅವರಿಗೆ ಪಿ. ಎಚ್.ಡಿ ಪದವಿ ಪ್ರದಾನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ತ್ರೋಬಾಲ್ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಕುವೆಟ್ಟು: ಮದ್ದಡ್ಕ ನಿವಾಸಿ ಹೆನ್ರಿ ಡಿಸೋಜ ನಿಧನ

Suddi Udaya

ಭಾರೀ ಮಳೆ ಹಿನ್ನೆಲೆ: ನಾಳೆ(ಆ.18)ದ.ಕ. ಜಿಲ್ಲಾ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

Suddi Udaya

ನಿಡ್ಲೆ: ನರೇಗಾ ಯೋಜನೆಯ ಕೂಲಿಕಾರರಿಗೆ ಆರೋಗ್ಯ ತಪಾಸಣೆ

Suddi Udaya

ಇಂಗ್ಲೆಂಡ್ ನಲ್ಲಿ ಗುರುವಾಯನಕೆರೆಯ 12 ವರ್ಷದ ಬಾಲಕನ ಮಹಾನ್ ಸಾಧನೆ- ಬ್ರಿಟೀಷ್ ನ್ಯಾಷನಲ್ ಚಾಂಪಿಯನ್ ಶಿಪ್ ನ 4ನೇ ಸುತ್ತಿನಲ್ಲಿ ಪ್ರಶಸ್ತಿ ಪಡೆದ ಕಾರ್ ರೇಸರ್ ಕನಿಷ್ಕ್ ರಾವ್

Suddi Udaya
error: Content is protected !!