ರಾಜ್ಯಮಟ್ಟದ ಸ್ಪೆಲ್ ಬೀ ಸ್ಪರ್ಧೆ: ಹೋಲಿ ರಿಡೀಮರ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ: ‘ವಿನ್ ನ್ಯಾಶನಲ್ ಸ್ಪೆಲ್ ಬೀ’ ಯವರು ಬೆಂಗಳೂರಿನ ಅಶೋಕ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಜಿಯಾ ಬ್ರಿಯೋನ ಲೋಬೊ (3ನೇ) 9ನೇ ಶ್ರೇಣಿ, ಮಹಮ್ಮದ್ ಸಮೀರ್ (9ನೇ) 13ನೇ ಶ್ರೇಣಿ, ಆಧ್ಯಾ ಬಿ ಆರ್ (3ನೇ)14ನೇ ಶ್ರೇಣಿ, ಭುವಿ ಕೆ ಎಲ್ (3ನೇ) 20ನೇ ಶ್ರೇಣಿ, ಪ್ರಜ್ಞ ಪಿ ವಿ (8ನೇ) 22ನೇ ಶ್ರೇಣಿ, ಅವಿನ್ ಎಸ್ (6ನೇ) 23ನೇ ಶ್ರೇಣಿ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಘನತೆಯನ್ನು ಹೆಚ್ಚಿಸಿದ್ದಾರೆ. ತ್ರಿಶಾ ಎಂ (8ನೇ) 31ನೇ ಶ್ರೇಣಿ, ಅರ್ವಿನ್ ಬೆನ್ನಿಸ್ (7ನೇ) 32ನೇ ಶ್ರೇಣಿ, ಮಹಮ್ಮದ್ ಮಾಝಿನ್ (4ನೇ) 44ನೇ ಶ್ರೇಣಿ ಹಾಗೂ ಅಕ್ಷತಾ ಎಂ ಡಿ (4ನೇ) 54 ಪಡೆದಿದ್ದಾರೆ.


ಹಾಗೆಯೇ ವಿಝ್ ಸ್ಪರ್ಧೆಯಲ್ಲಿ ವಿಯೋಲ ಡಿಸೋಜ (8ನೇ) 33ನೇ ಶ್ರೇಣಿ, ಸುಝಾನ ಸೆರಾವೋ(7ನೇ) 46ನೇ ಶ್ರೇಣಿ, ಆಧ್ಯಾ ಬಿ ಆರ್ (3ನೇ) 27ನೇ ಶ್ರೇಣಿ ಪಡೆದಿದ್ದಾರೆ. ಸಹಶಿಕ್ಷಕಿಯರಾದ ಶ್ರೀಮತಿ ಎಲ್ವಿಟಾ ಪಾಯ್ಸ್ , ಶ್ರೀಮತಿ ದಿವ್ಯಾ ಜಿ, ಶ್ರೀಮತಿ ಸುಮಿತ್ರಾ ಸಹಕರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Leave a Comment

error: Content is protected !!