32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪುಂಜಾಲಕಟ್ಟೆ ವಲಯಮಟ್ಟದ ಪ್ರೌಢಶಾಲಾ ವಿಭಾಗದ ತ್ರೋಬಾಲ್ ಪಂದ್ಯಾಟ ಉದ್ಘಾಟನೆ

ಮಚ್ಚಿನ: ಪುಂಜಾಲಕಟ್ಟೆ ವಲಯ ಮಟ್ಟದ 2023-24 ನೇ ಸಾಲಿನ ತ್ರೋಬಾಲ್ ಪಂದ್ಯಾಟವು ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವನ್ನು ಮಚ್ಚಿನ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿಯವರು ನೆರವೇರಿಸಿ, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ದೊರೆಯಬೇಕು. ಆ ಮೂಲಕ ಅವರು ತಮ್ಮ ಪ್ರತಿಭೆಯನ್ನು ಪ್ರಕಟ ಪಡಿಸುವುದರ ಜೊತೆಗೆ ದೈಹಿಕ ಸದೃಢತೆಯನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು.

ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪ. ಡಿ ಇವರು ಕ್ರೀಡಾಕೂಟದಲ್ಲಿ ಸೋಲು ಗೆಲುವು ಸಹಜ. ಆದರೆ ವಿದ್ಯಾರ್ಥಿಗಳು ಗೆಲುವನ್ನು ಪಡೆದರೆ ಜೊತೆಗೆ ಸೋಲನ್ನು ಸಮಚಿತ್ತತೆಯಿಂದ ಸ್ವೀಕರಿಸುವ ಮನೋಭಾವ ಹೊಂದಿರಬೇಕು.

ಕ್ರೀಡೆ ಎಂಬುದು ಸಾಮಾಜಿಕ ಶಾಂತಿಗೆ ಪ್ರೇರಣೆಯಾಗಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ತಾಲೂಕು ಅಕ್ಷರ ದಾಸೋಹದ ನೋಡಲ್ ಶ್ರೀಮತಿ ತಾರಕೇಶ್ವರಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿ ಅಜಿತ್ ಕೊಕ್ರಾಡಿ, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಚೇತನ, ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷರಾದ ಹೊನ್ನಪ್ಪ ಸಾಲಿಯಾನ್, ಎಸ್. ಡಿ. ಎಂ. ಸಿ ಶಿಕ್ಷಣ ತಜ್ಞರಾದ ಡಾ. ಮಾಧವ ಶೆಟ್ಟಿ ,ಶಾಲಾ ಮುಖ್ಯೋಪಾಧ್ಯಯರಾದ ಪ್ರಕಾಶ್. ಎಸ್. ನಾಯ್ಕ್ ಶಾಲಾ , ಕ್ರೀಡಾಕೂಟದ ವಲಯ ಸಂಘಟಕರಾದ ಸುಭಾಶ್ಚಂದ್ರ ಪಿ. ಪೂಜಾರಿ, ಎಸ್. ಡಿ .ಎಂ.ಸಿ ಸದಸ್ಯೆಯಾಗಿರುವ ಶ್ರೀಮತಿ ಭವ್ಯ, ಶ್ರೀಮತಿ ಕುಸುಮಾವತಿ ಹಾಗೂ ನಿಕಟಪೂರ್ವ ಕಾರ್ಯಾಧ್ಯಕ್ಷರಾದ ರುಕ್ಮಯ ಬಾಳಿಂಜ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ದೈಹಿಕ ಶಿಕ್ಷಕರಾದ ಸುಭಾಶ್ಚಂದ್ರ ಪಿ.ಪೂಜಾರಿಯವರು ಸ್ವಾಗತಿಸಿ, ಕನ್ನಡ ಶಿಕ್ಷಕರಾದ ಅವಿನಾಶ ಧನ್ಯವಾದವಿತ್ತರು. ಹಿಂದಿ ಭಾಷಾ ಶಿಕ್ಷಕ ವಿ. ಚಂದಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Related posts

ಕುವೆಟ್ಟು : ಶಕ್ತಿನಗರ- ಪಿಲಿಚಾಮುಂಡಿಕಲ್ಲು ಸಂಪರ್ಕ ರಸ್ತೆಯ ಮರುಡಾಮರೀಕರಣ ಮಾಡಿಸಿಕೊಡುವ ಬಗ್ಗೆ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya

ವಾಲಿಬಾಲ್ ಪಂದ್ಯಾಟ; ರಕ್ಷಿತಾ ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಕುವೆಟ್ಟು: ಕೇದಳಿಕೆ ನಿವಾಸಿ ಬಾಬು ನಾಯ್ಕ್ ನಿಧನ

Suddi Udaya

ಟೆಲಿಗ್ರಾಮ್‌ ಆಪ್‌ ಮೂಲಕ ಹಣ ವರ್ಗಾಹಿಸಿ ಮೋಸ: ಕುವೆಟ್ಟು ನಿವಾಸಿ ನುಪೈಲಾ ರಿಗೆ ರೂ. 6.95 ಲಕ್ಷ ವಂಚನೆ

Suddi Udaya

ಗೇರುಕಟ್ಟೆ ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ವತಿಯಿಂದ ಕೃಷ್ಣ ಜನ್ಮಾಷ್ಠಮಿ

Suddi Udaya

ನಡ ಮೂಡಾಯಿಬೆಟ್ಟು ಹಂದಿ ಸಾಕಾಣಾ ಕೇಂದ್ರದಿಂದ ಹಂದಿಯನ್ನು ಎಳೆದೊಯ್ದ ಚಿರತೆ

Suddi Udaya
error: Content is protected !!