ಉಜಿರೆ : “ಭಾಷಾ ಅಭಿವೃದ್ಧಿಯಾಗಬೇಕಾದರೆ ಪುಸ್ತಕಗಳ ಓದು ಮುಖ್ಯ. ಮಾತೃಭಾಷೆಯಲ್ಲಿ ಹಿಡಿತಹೊಂದಿದವರು ಇತರ ಭಾಷೆಗಳನ್ನು ಸರಾಗವಾಗಿ ಕಲಿಯಬಹುದು ಮತ್ತು ಎಲ್ಲಾ ಭಾಷೆಗಳು ಮುಖ್ಯವಾದವುಗಳು” ಎಂದು ಎಸ್.ಡಿ.ಎಮ್ ಪದವಿಪೂರ್ವ ವಸತಿ ಕಾಲೇಜಿನ ಪ್ರಾಶುಪಾಲರಾದ ಸುನಿಲ್ ಪಂಡಿತ್ ಹೇಳಿದರು.
ಇವರು ಸೆ.14 ರಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ನಡೆದ ‘ಹಿಂದಿ ದಿವಸ’ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ, ಕಿರು ಪ್ರಹಸನ, ವೃಂದ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯಕ್ ವಹಿಸಿದ್ದರು. ವಿದ್ಯಾರ್ಥಿನಿಯರಾದ ನಿಶ್ಮಿತಾ ಮತ್ತು ಅಭಿಷ್ಟ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಮರ್ಲಿನ್ ವಂದಿಸಿದರು.