September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಿ.29,30,31 ಸುಲ್ಕೇರಿ ಬಸದಿ ಧಾಮ ಸಂಪ್ರೋಕ್ಷಣ ಪೂರ್ವಕ ಪ್ರತಿಷ್ಠಾ ಮಹೋತ್ಸವ

ಸುಲ್ಕೇರಿ: ಭಗವಾನ್ ಶ್ರೀ ನೇಮಿನಾಥ ಸ್ವಾಮಿಯ ಧಾಮ ಸಂಪ್ರೋಕ್ಷಣ ಪೂರ್ವಕ ಪ್ರತಿಷ್ಟಾ ಮಹೋತ್ಸವದ ದಿನಾಂಕ ಪ್ರಕಟ ಪಡಿಸುವ ಸಭೆ ಸೆ.15 ರಂದು ಸುಲ್ಕೇರಿ ಬಸದಿಯಲ್ಲಿ ನಡೆಯಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಡಿಸೆಂಬರ್ 29,30,31 ರಂದು ಧಾಮ ಸಂಪ್ರೋಕ್ಷಣಾ ಪೂರ್ವಕ ಭಗವಾನ್ ಶ್ರೀ ನೇಮಿನಾಥ ಸ್ವಾಮಿಯ ಪ್ರತಿಷ್ಠಾ ಮಹೋತ್ಸವ ನಡೆಸುವ ಬಗ್ಗೆ ದಿನಾಂಕ ಪ್ರಕಟ ಪಡಿಸಲಾಯಿತು.

ಸಭೆಯಲ್ಲಿ ಜಿ.ಎಸ್ ರಾಜೇಂದ್ರ ಕುಮಾರ್ ತುಮಕೂರು, ಶ್ರೀಮತಿ ಕಿರಣ್ ಪಾಟೀಲ್ ನಾಸಿಕ್, ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು, ಶ್ರೀಮತಿ ನವರತ್ನ ತುಮಕೂರು, ಬಸದಿಯ ಪುರೋಹಿತರಾದ ಹರ್ಷ ಇಂದ್ರರು ಉಪಸ್ಥಿತರಿದ್ದರು.

ಬಸದಿಯ ಆಡಳಿತ ಮೊಕ್ತೇಸರರಾದ ರವಿರಾಜ ಹೆಗ್ಡೆ ನಾವರಗುತ್ತು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭಬಸದಿಗೆ ಸಂಬಂಧಿಸಿದ ಹಾಗೂ ಸಮಸ್ತ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.ವಕೀಲರಾದ ಅಜಿತ್ ಎನ್ ನಾವರ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ವಿಜಯ ಕುಮಾರ್ ಜೈನ್ ವಂದಿಸಿದರು.

Related posts

ಬೆಳ್ತಂಗಡಿ ಟೀಂ ಅಭಯಹಸ್ತ ಇದರ ಸಮಾಲೋಚನಾ ಸಭೆ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂ.ಅ. ಹಿ. ಪ್ರಾ. ಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ

Suddi Udaya

ನೆರಿಯ: ಕುಡುಮಡ್ಕ ಸೌಗಂಧಿಕ ಮನೆಯ ನೀಲಮ್ಮ ನಿಧನ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾಗಿ ಗಾಯತ್ರಿ ಪಿ ಅಧಿಕಾರ ಸ್ವೀಕಾರ

Suddi Udaya

ಪುಂಜಾಲಕಟ್ಟೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ: ಅಧ್ಯಕ್ಷರಾಗಿ ಚಿದಾನಂದ ಮಾಣಿಂಜ ಆಯ್ಕೆ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ‘ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!