ಮಚ್ಚಿನ: ಪುಂಜಾಲಕಟ್ಟೆ ವಲಯ ಮಟ್ಟದ 2023-24 ನೇ ಸಾಲಿನ ತ್ರೋಬಾಲ್ ಪಂದ್ಯಾಟವು ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವನ್ನು ಮಚ್ಚಿನ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿಯವರು ನೆರವೇರಿಸಿ, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ದೊರೆಯಬೇಕು. ಆ ಮೂಲಕ ಅವರು ತಮ್ಮ ಪ್ರತಿಭೆಯನ್ನು ಪ್ರಕಟ ಪಡಿಸುವುದರ ಜೊತೆಗೆ ದೈಹಿಕ ಸದೃಢತೆಯನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು.
ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪ. ಡಿ ಇವರು ಕ್ರೀಡಾಕೂಟದಲ್ಲಿ ಸೋಲು ಗೆಲುವು ಸಹಜ. ಆದರೆ ವಿದ್ಯಾರ್ಥಿಗಳು ಗೆಲುವನ್ನು ಪಡೆದರೆ ಜೊತೆಗೆ ಸೋಲನ್ನು ಸಮಚಿತ್ತತೆಯಿಂದ ಸ್ವೀಕರಿಸುವ ಮನೋಭಾವ ಹೊಂದಿರಬೇಕು.
ಕ್ರೀಡೆ ಎಂಬುದು ಸಾಮಾಜಿಕ ಶಾಂತಿಗೆ ಪ್ರೇರಣೆಯಾಗಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ತಾಲೂಕು ಅಕ್ಷರ ದಾಸೋಹದ ನೋಡಲ್ ಶ್ರೀಮತಿ ತಾರಕೇಶ್ವರಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿ ಅಜಿತ್ ಕೊಕ್ರಾಡಿ, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಚೇತನ, ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷರಾದ ಹೊನ್ನಪ್ಪ ಸಾಲಿಯಾನ್, ಎಸ್. ಡಿ. ಎಂ. ಸಿ ಶಿಕ್ಷಣ ತಜ್ಞರಾದ ಡಾ. ಮಾಧವ ಶೆಟ್ಟಿ ,ಶಾಲಾ ಮುಖ್ಯೋಪಾಧ್ಯಯರಾದ ಪ್ರಕಾಶ್. ಎಸ್. ನಾಯ್ಕ್ ಶಾಲಾ , ಕ್ರೀಡಾಕೂಟದ ವಲಯ ಸಂಘಟಕರಾದ ಸುಭಾಶ್ಚಂದ್ರ ಪಿ. ಪೂಜಾರಿ, ಎಸ್. ಡಿ .ಎಂ.ಸಿ ಸದಸ್ಯೆಯಾಗಿರುವ ಶ್ರೀಮತಿ ಭವ್ಯ, ಶ್ರೀಮತಿ ಕುಸುಮಾವತಿ ಹಾಗೂ ನಿಕಟಪೂರ್ವ ಕಾರ್ಯಾಧ್ಯಕ್ಷರಾದ ರುಕ್ಮಯ ಬಾಳಿಂಜ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ದೈಹಿಕ ಶಿಕ್ಷಕರಾದ ಸುಭಾಶ್ಚಂದ್ರ ಪಿ.ಪೂಜಾರಿಯವರು ಸ್ವಾಗತಿಸಿ, ಕನ್ನಡ ಶಿಕ್ಷಕರಾದ ಅವಿನಾಶ ಧನ್ಯವಾದವಿತ್ತರು. ಹಿಂದಿ ಭಾಷಾ ಶಿಕ್ಷಕ ವಿ. ಚಂದಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.