33.4 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜದಲ್ಲಿ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘ ರಚನೆಗೆ ಬಳಂಜ, ನಾಲ್ಕೂರು, ತೆಂಕಕಾರಂದೂರು ರೈತ ಸದಸ್ಯರ ಬೇಡಿಕೆ: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯಲ್ಲಿ ಪ್ರತ್ಯೇಕ ಸೊಸೈಟಿ ರಚನೆಗೆ ನಿರ್ಣಯ

ಅಳದಂಗಡಿ:ಬಳಂಜದಲ್ಲಿ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸುವಂತೆ ಬಳಂಜ, ನಾಲ್ಕೂರು, ತೆಂಕಕಾರಂದೂರು ಗ್ರಾಮದ ರೈತ ಸದಸ್ಯರು ಅಳದಂಗಡಿ ಸಿಎ ಬ್ಯಾಂಕಿನ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಮನವಿ ಸಲ್ಲಿಸಿದರು.

ಅಳದಂಗಡಿ ಸಿ.ಎ ಬ್ಯಾಂಕಿನ ಅಧ್ಯಕ್ಷರು ಪ್ರತ್ಯೇಕ ಸಹಕಾರ ಸಂಘ ರಚನೆಗೆ ಬೇಕಾಗುವ ಹಲವಾರು ನಿಯಮಗಳ ಬಗ್ಗೆ ಸಭೆಗೆ ತಿಳಿಸಿದರು. ಬಳಂಜ ,ನಾಲ್ಕೂರು, ತೆಂಕಕಾರಂದೂರು ರೈತ ಸದಸ್ಯರು ಸಹಕಾರಿ ಸಂಘಕ್ಕೆ ಬೇಕಾಗುವ ಎಲ್ಲಾ ನಿಯಮಗಳಿಗೆ ನಾವು ಶಕ್ತರಾಗಿದ್ದೇವೆ ಎಂದು ತಿಳಿಸಿದರು. ಇದರ ಬಗ್ಗೆ ನಿರ್ಣಯ ಕೈಗೊಂಡು 20 ದಿವಸದೊಳಗೆ ನಿರ್ಣಯ ಪತ್ರವನ್ನು ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಪ್ರತ್ಯೇಕ ಕೃಷಿ ಪತ್ತಿನ ಸಹಕಾರಿ ಸಂಘದ ರಚನೆಗೆ ಬಳಂಜ, ನಾಲ್ಕೂರು, ತೆಂಕಕಾರಂದೂರು ರೈತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ಸುಲ್ಕೇರಿ: ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ

Suddi Udaya

ಅಮೃತ ಸೋಮೇಶ್ವರರವರ ನೆನಪಿಗೆ ‘ಅಮೃತ ಮಥನ’ ಕಾರ್ಯಕ್ರಮ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯದ ಮಾಹಿತಿ ಕಾರ್ಯಕ್ರಮ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಬೆಳ್ತಂಗಡಿ ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ನಿಂದ ಬೆಂಬಲ

Suddi Udaya

ಮುಗಳಿ ಬ್ರಹ್ಮ ಕ್ಷೇತ್ರ ದೇವರ ಸನ್ನಿಧಿ ಬಸದಿ ಒಳಗೆ ನುಗ್ಗಿದ್ದ ನೀರು

Suddi Udaya

ಗೇರುಕಟ್ಟೆಯಲ್ಲಿ ವಿಶ್ವ ಅಗ್ನಿಹೋತ್ರ ದಿನದ ಆಚರಣೆ

Suddi Udaya
error: Content is protected !!