24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಹಾಸಭೆ: ವಾರ್ಷಿಕ 150 ಕೋಟಿ ವ್ಯವಹಾರ ಮಾಡಿ 69 ಲಕ್ಷ ನಿವ್ವಳ ಲಾಭ ಗಳಿಸಿದ್ದೇವೆ: ನವೀನ್ ಕೆ ಸಾಮಾನಿ

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ನವೀನ್ ಕೆ. ಸಾಮಾನಿಯವರ ಅಧ್ಯಕ್ಷತೆಯಲ್ಲಿ ನವೋದಯ ಸಭಾಭವನದಲ್ಲಿ ಸೆ. 16 ರಂದು ಪಡೆಯಿತು.

ಸಂಘವು ವರದಿ‌ ಸಾಲಿನಲ್ಲಿ 150 ಕೋಟಿ ವ್ಯವಹಾರ ನಡೆಸಿ ಸುಮಾರು 69 ಲಕ್ಷ ನಿವ್ವಳ ಲಾಭ ಗಳಿಸಿದೆ. ಜೊತೆಗೆ ಸಂಘವು ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದು ಈ ವರ್ಷ ಮೃತಪಟ್ಟ ರೈತ ಸದಸ್ಯರ ಕುಟುಂಬಕ್ಕೆ ರೂ 37 ಸಾವಿರ ಸಹಾಯಧನ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ನವೀನ್ ಕೆ ಸಾಮಾನಿ ಹೇಳಿದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ತಾರಾನಾಥ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮ್ಮಾಜಿ ಕೋಟ್ಯಾನ್,ಕೆ.ನಾರಾಯಣ ರಾವ್,ಆನಂದ ಸಾಲಿಯಾನ್, ಶ್ರೀಮತಿ ಸುಮಿತ್ರಾ ಬಿ ಹೆಗ್ಡೆ,ಶ್ರೀಮತಿ ಮಲ್ಲಿಕಾ,ಶಿವಪ್ಪ ಪೂಜಾರಿ, ರಾಮ ಬಂಗೇರಾ, ಅಶೋಧರ ಎನ್,ಶೀನಪ್ಪ ಎಂ,ಶ್ರೀಮತಿ ಸುಶೀಲಾ, ಸುಧೀರ್ ಪಿ ಯಚ್, ನಿತ್ಯಾನಂದ ಶೆಟ್ಟಿ, ವಲಯ ಮೇಲ್ವಿಚಾರಕ ಸಂದೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಠೇವಣಿದಾರರಾದ ನೇಮು, ಹಿರಿಯ ಸದಸ್ಯರಾದ ಕೃಷ್ಣಪ್ಪ ಮೂಲ್ಯ,ಪೂವಪ್ಪ ನಾಯ್ಕ,ಪಿ.ಎಂ ಸನ್ನಿ,ಕೇಶವ ಮಡಿವಾಳ,ತಿಮ್ಮಯ್ಯ ಆಚಾರ್ಯ,ಅಣ್ಣು ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

Related posts

ಎ.22-ಮೇ.10: ಆದಿಗುರು ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರದಲ್ಲಿ ಬೇಸಿಗೆ ಶಿಬಿರ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ಮತದಾನದ ಮಾಹಿತಿ ಶಿಬಿರ

Suddi Udaya

ಬೆಳ್ತಂಗಡಿಯ ಹಿರಿಯ ಹೊಟೇಲ್ ಉದ್ಯಮಿ ಅಬೂಬಕ್ಕರ್ ಹೃದಯಾಘಾತದಿಂದ ನಿಧನ

Suddi Udaya

ಹರೀಶ್ ಪೂಂಜರ ಪರ ಚುನಾವಣಾ ಪ್ರಚಾರಕ್ಕೆ ಮುಂಬೈ ಉದ್ಯಮಿ ಸುರೇಶ್ ಪೂಜಾರಿ

Suddi Udaya

ಲಾಯಿಲ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ವಾರ್ಷಿಕ ಸಭೆ: ಸಮಿತಿ ರಚನೆ

Suddi Udaya
error: Content is protected !!