April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ 1.07ಕೋಟಿ ನಿವ್ವಳ ಲಾಭ, ಶೇ. 11 ಡಿವಿಡೆಂಡ್ ಘೋಷಣೆ

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸೆ.17ರಂದು ಪದ್ಮುಂಜ ಸಹಕಾರಿ ಸಂಘದ ರೈತ ಸಭಾ ಸಭಾಭವನದಲ್ಲಿ ಜರಗಿತು.

ಅಧ್ಯಕ್ಷತೆಯನ್ನು ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣಿಕ್ಕರ ವಹಿಸಿದ್ದರು.

ಈ ಸಾಲಿನ ವಾರ್ಷಿಕ ವ್ಯವಹಾರ ರೂ.333.45ಕೋಟಿ ನಡೆದಿದ್ದು ರೂ 1.07ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡ 11 ಡಿವಿಡೆಂಡ್ ಘೋಷಿಸಿದರು.

ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಸನ್ಮಾನ ಮತ್ತು ದ. ಕ ಉತ್ತಮ ಸಂಘ ಪ್ರಶಸ್ತಿ ಪಡೆದ ಬಂದಾರು ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಯವರಿಗೆ. ಶೇ.100 ಫಲಿತಾಂಶ ಪಡೆದ ಬಂದಾರು. ಮುಗ್ರು ಬುಲೆರಿ 3 ಶಾಲೆಯ ಮುಖ್ಯೋಪಾಧ್ಯಾಯರಿಗೆ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಂದರು ಶಾಲೆ ಯ ಪ್ರಶಾಂತ್ ರಿಗೆ ಮತ್ತು ವಾಲಿಬಾಲ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಗಳಿಗೆ ಸನ್ಮಾನ ಮಾಡಲಾಯಿತು.

ಉಪಾಧ್ಯಕ್ಷ ಅಶೋಕ್ ನಿರ್ದೇಶಕರಗಳಾದ ರಾಜೀವ ರೈ ಉದಯ ಭಟ್, ಉದಯ ಬಿ.ಕೆ., ನಾರಾಯಣಗೌಡ ರಾಮಣ್ಣ ಮಡಿವಾಳ, ಪಿಜಿನಾ ಮುಗೇರ., ಶೀಲಾವತಿ, ವಿನಯಶ್ರೀ, ದಿನೇಶ್ ನಾಯ್ಕ, ಕೇಶವ, ಡಿ.ಸಿ.ಸಿ ಪ್ರತಿನಿಧಿ ಸಂದೇಶ್‌ ಕುಮಾರ್ ಉಪಸ್ಥಿತರಿದ್ದರು. ಕಾರ್ಯನಿರ್ವಣಾಧಿಕಾರಿ ರಘುಪತಿ ಕೆ ವರದಿ ವಾಚಿಸಿದರು.

Related posts

ಮುಂಡಾಜೆಯಲ್ಲಿ ಕೂಲಿ ಕೆಲಸಕ್ಕೆ ಹೋದ ಮಹಿಳೆ ಕುಸಿದು ಬಿದ್ದು ಮೃತ್ಯು

Suddi Udaya

ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ: ತ್ರೋಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕು ತಂಡ ಪ್ರಥಮ ಸ್ಥಾನ

Suddi Udaya

ಜ 7: ಪೆರಾಡಿ ಮಾವಿನಕಟ್ಟೆಯಲ್ಲಿ 50ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ

Suddi Udaya

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ಬಳಂಜ:ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ಟಾಪರ್ ಅನುಪ್ರಿಯರವರಿಗೆ ಸನ್ಮಾನ

Suddi Udaya

ದರ್ಭೆತಡ್ಕ ಸುದೆಗಂಡಿಯಲ್ಲಿ ಕಿರು ಸೇತುವೆಯ ದುರಸ್ತಿ ಕಾರ್ಯದ ಬಗ್ಗೆ ಗ್ರಾಮಸ್ಥರ ಸಭೆ: ಸಮಿತಿ ರಚನೆ

Suddi Udaya
error: Content is protected !!