ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.17ರಂದು ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಪುರ ದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಬಿ ಅಬ್ದುಲ್ ರಜಾಕ್ ಅಧ್ಯಕ್ಷತೆಯನ್ನು ವಹಿಸಿ ಈ ವರ್ಷ ರೂ .90. O0ಕೋಟಿ ವ್ಯವಹಾರ ಗಳಿಸಿದು.23.47 ಲಕ್ಷ ಲಾಭ ಗಳಿಸಿದೆ. ಶೇಕಡ 9 ಡಿವಿಡೆಂಟ್ ಘೋಷಿದರು.
ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಹಣಧಿಕಾರಿ ರಾಘವೇಂದ್ರ ಅಡಪ ಮಂಡಿಸಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ . ಸಿ ಮತ್ತು ಪಿ ಯು. ಸಿ ನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಉಪಾಧ್ಯಕ್ಷರಾದ ನಾಭಿರಾಜಿ ಹೆಗ್ಡೆ, ನಿರ್ದೇಶಕರಾದ ಶಿವಪ್ಪ ಪೂಜಾರಿ ಹಾಗೂ ಎನ್‌ಹೆಚ್ ಅಬ್ದುಲ್ ರಹಿಮಾನ್., ಶೇಖರ್ ಪೂಜಾರಿ, ಜನಾರ್ಧನ್ ಪೂಜಾರಿ, ಕೆ ರವಿ, ಬಿ ಹುಸೇನ್, ನೆಬೀಸಾ, ಸಂಗೀತ ಹಾಗೂ ವೃತ್ತಿಪರ ನಿರ್ದೇಶಕರಾದ ಇನಾಸ್ ರೋಡ್ರಿಗಸ್, ಅಬ್ದುಲ್ ಮುನೀರ್ ಡಿಸಿಸಿ ಪ್ರತಿನಿಧಿ , ಸಿರಾಜುದ್ದೀನ್ ಉಪಸ್ಥಿತರಿದ್ದರು.
ಶಾಹಿದ ಕಾರ್ಯಕ್ರಮ ನಿರೂಪಿಸಿ ಸಂಘದ ಸಿಬ್ಬಂದಿ ನಮಿತಾ ಸ್ವಾಗತಿಸಿ, ಉಪಾಧ್ಯಕ್ಷ ನಾಭಿರಾಜ್ ಹೆಗ್ಡೆ ಧನ್ಯವಾದವಿತ್ತರು.