ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸೆ.17ರಂದು ಪದ್ಮುಂಜ ಸಹಕಾರಿ ಸಂಘದ ರೈತ ಸಭಾ ಸಭಾಭವನದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣಿಕ್ಕರ ವಹಿಸಿದ್ದರು.
ಈ ಸಾಲಿನ ವಾರ್ಷಿಕ ವ್ಯವಹಾರ ರೂ.333.45ಕೋಟಿ ನಡೆದಿದ್ದು ರೂ 1.07ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡ 11 ಡಿವಿಡೆಂಡ್ ಘೋಷಿಸಿದರು.
ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಸನ್ಮಾನ ಮತ್ತು ದ. ಕ ಉತ್ತಮ ಸಂಘ ಪ್ರಶಸ್ತಿ ಪಡೆದ ಬಂದಾರು ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಯವರಿಗೆ. ಶೇ.100 ಫಲಿತಾಂಶ ಪಡೆದ ಬಂದಾರು. ಮುಗ್ರು ಬುಲೆರಿ 3 ಶಾಲೆಯ ಮುಖ್ಯೋಪಾಧ್ಯಾಯರಿಗೆ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಂದರು ಶಾಲೆ ಯ ಪ್ರಶಾಂತ್ ರಿಗೆ ಮತ್ತು ವಾಲಿಬಾಲ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಗಳಿಗೆ ಸನ್ಮಾನ ಮಾಡಲಾಯಿತು.
ಉಪಾಧ್ಯಕ್ಷ ಅಶೋಕ್ ನಿರ್ದೇಶಕರಗಳಾದ ರಾಜೀವ ರೈ ಉದಯ ಭಟ್, ಉದಯ ಬಿ.ಕೆ., ನಾರಾಯಣಗೌಡ ರಾಮಣ್ಣ ಮಡಿವಾಳ, ಪಿಜಿನಾ ಮುಗೇರ., ಶೀಲಾವತಿ, ವಿನಯಶ್ರೀ, ದಿನೇಶ್ ನಾಯ್ಕ, ಕೇಶವ, ಡಿ.ಸಿ.ಸಿ ಪ್ರತಿನಿಧಿ ಸಂದೇಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯನಿರ್ವಣಾಧಿಕಾರಿ ರಘುಪತಿ ಕೆ ವರದಿ ವಾಚಿಸಿದರು.