23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಶ್ರೀವಿಶ್ವಕರ್ಮಾಭ್ಯುದಯ ಸಭಾದಿಂದ ಶ್ರೀವಿಶ್ವಕರ್ಮಯಜ್ಞ ಮತ್ತು ಪೂಜೆ

ಬೆಳ್ತಂಗಡಿ: ಶ್ರೀ ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ-ಬೆಳ್ತಂಗಡಿ ಮತ್ತು ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ ಮತ್ತು ಧಾರ್ಮಿಕ ಸಭೆ ಸೆ.17ರಂದು ಸಂಘದ ಸಭಾ ಭವನದಲ್ಲಿ ಜರುಗಿತು.

ಶಿವಪ್ರಸಾದ್ ಪುರೋಹಿತ್ ಸವಣಾಲು ಇವರ ಪೌರೋಹಿತ್ಯದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.ನಂತರ ನಡೆದ ಸಭೆಯ ಅಧ್ಯಕ್ಷತೆಯನ್ನು ಶ್ರೀ ವಿಶ್ವಕರ್ಮಾಭ್ಯುದಯದ ಅಧ್ಯಕ್ಷ ಗೋಪಾಲ ಆಚಾರ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಾಣಿಯೂರು ಜಿ.ಪಂ ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ ಆಚಾರ್ಯ ಭಾಗವಹಿಸಿದ್ದರು. ಧನಲಕ್ಷ್ಮೀ ಜುವೆಲ್ಲರ‍್ಸ್‌ನ ಮಾಲಕ ಕೆ. ರಮೇಶ್ ಆಚಾರ್ಯ ಉಜಿರೆ, ವಿಸ್ತತ ಕಟ್ಟಡ ಸಮಿತಿ ಅಧ್ಯಕ್ಷ ರಾಘವೇಂದ್ರ ಆಚಾರ್ಯ ನೈಕುಳಿ, ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ವಸಂತಿ ಮೋಹನ್ ಆಚಾರ್ಯ, ನವದುರ್ಗ ಜುವೆಲ್ಲರ‍್ಸ್ ಕೊಕ್ರಾಡಿಯ ಹರಿಶ್ಚಂದ್ರ ಆಚಾರ್ಯ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಶ್ರೀಧರ ಆಚಾರ್ಯ ವಿಶ್ವಕೃಪಾ ಖಂಡಿಗ, ಇಸ್ರೋ ಸಂಸ್ಥೆಯ ಇಂಜನಿಯರಿಂಗ್ ವಿಭಾಗದ ಸಂಪತ್ ಆಚಾರ್ಯ, ಶ್ರೀಧರ ಆಚಾರ್ಯ ಸೋಮಂತಡ್ಕ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸವಣಾಲು ಶಾಲಾ ಶಿಕ್ಷಕ ರಾಜೇಶ್ ಆಚಾರ್ಯ ಧಾರ್ಮಿಕ ಉಪನ್ಯಾಸ ವಿಶ್ವಕರ್ಮ ಯಜ್ಞದ ಮಹತ್ವ ಬಗ್ಗೆ ತಿಳಿಸಿದರು.ಉಪಾಧ್ಯಕ್ಷ ಸೀತಾರಾಮ ಆಚಾರ್ಯ ಸ್ವಾಗತಿಸಿದರು. ಆರ್.ಕೆ ಕನ್ನಾಜೆ ಕಾಯ೯ಕ್ರಮ ನಿರೂಪಿಸಿದರು. ಕಾಯ೯ದಶಿ೯ ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಜತೆ ಕಾರ್ಯದರ್ಶಿ ಸದಾನಂದ ಆಚಾರ್ಯ ಸುಲ್ಕೇರಿಮೊಗ್ರು, ಕೋಶಾಧಿಕಾರಿ ಯೋಗೀಶ್ ಆಚಾರ್ಯ ಸವಣಾಲು ಸಹಕರಿಸಿದರು.ವಿಶೇಷ ಕಾರ್ಯಕ್ರಮವಾಗಿ ಸಮಾಜ ಬಾಂಧವ ಕಲಾವಿಧರಿಂದ ಯಕ್ಷಗಾನ ‘ಪಾಂಚಜನ್ಯ’(ಗುರುದಕ್ಷಿಣೆ) ಪ್ರದರ್ಶನಗೊಂಡಿತು.

Related posts

ಕಾಶಿಪಟ್ಣ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಹಿರಿಯ ಛಾಯಾಗ್ರಾಹಕ ಶಾಂತಲಾ ಸ್ಟುಡಿಯೋ ಮಾಲಕ ಶಶಿಧರ್ ರಾವ್ ನಿಧನ

Suddi Udaya

ನಡ : ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya

ಕಳೆಂಜ: ಜಾಗದ ವಿಚಾರವಾಗಿ ಹಲ್ಲೆ, ಬೆದರಿಕೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಕುಣಿತ ಭಜನಾ ತರಬೇತಿ ಉದ್ಘಾಟನೆ

Suddi Udaya

ಶಿಶಿಲ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಶುದ್ಧ ಕುಡಿಯುವ ನೀರಿನ ಘಟಕದ ಲೋಕಾರ್ಪಣೆ

Suddi Udaya
error: Content is protected !!