28.3 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ- ಶೇ 20 ಡಿವಿಡೆಂಡ್ ಹಾಗೂ ತಾಲೂಕಿನ ಎಲ್ಲಾ ಸರಕಾರಿ ಆಸ್ಪತ್ರೆಗಳ ಡಿ ವರ್ಗದ ಹೊರ ಗುತ್ತಿಗೆ ನೌಕರರಿಗೆ ಉಚಿತ ಸಮವಸ್ತ್ರ ನೀಡುವ ಘೋಷಣೆ

ಬೆಳ್ತಂಗಡಿ: ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆಯು ಕೆ. ಜಯಕೀರ್ತಿ ಜೈನ್ ರವರ ಅಧ್ಯಕ್ಷತೆಯಲ್ಲಿ ಸೆ.17ರಂದು ಸರಕಾರಿ ನೌಕರರ ಏಕತಾ ಸೌಧ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಹಕಾರಿ ಸಂಘವು ಲಾಭಾಂಶದಲ್ಲಿ 20% ಡೆವಿಡೆಂಡ್ ನ್ನು ಹಾಗೂ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಹಾಗೂ ತಾಲೂಕಿನ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 40 ಮಂದಿ ಡಿ’ ವರ್ಗದ ಎಲ್ಲಾ ಪುರುಷ ಮತ್ತು ಮಹಿಳಾ ನೌಕರರಿಗೆ ಇಲಾಖೆಯು ಸೂಚಿಸಿದ ಸಮವಸ್ತ್ರವನ್ನು ನಮ್ಮ ಸಹಕಾರಿ ಸಂಘದ ವತಿಯಿಂದ ಉಚಿತವಾಗಿ ನೀಡುವುದಾಗಿ ಸಂಘದ ಅಧ್ಯಕ್ಷರಾದ, ರಾಜ್ಯ ಸರಕಾರಿ ನೌಕರರ ಕೇಂದ್ರ ಸಂಘದ ಜಂಟಿ ಕಾರ್ಯದರ್ಶಿಯವರಾದ ಜಿ. ಜಯಕೀರ್ತಿ ಜೈನ್ ರವರು ಘೋಷಿಸಿದರು.

ಸಹಕಾರಿ ಸಂಘದ ಸದಸ್ಯರ ಮಕ್ಕಳು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದ ಸುಮಾರು 20 ಜನರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಚಿದಾನಂದ ಎಸ್, ಹೂಗಾರ್ ಸ್ವಾಗತಿಸಿ, ನಿರ್ದೇಶಕರಾದ ಶ್ರೀಮತಿ ರತ್ನಾವತಿ ಇವರು ಪ್ರಾರ್ಥನೆ ಮಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವತ್ಸಲಾ ಜ್ಯೋತಿರಾಜ್ ಇವರು ಸಂಘದ ವರದಿ ನೀಡಿದರು. ಸಂಘದ ಕಾನೂನು ಸಲಹೆಗಾರರಾದ ಶಶಿಕಿರಣ್ ಜೈನ್, ಸಲಹೆಗಾರರಾದ ವಸಂತ ಸುವರ್ಣ, ಶಿವಯ್ಯ ನ್ಯಾಯವಾದಿಗಳು ಕೊಕ್ಕಡ ಶಾಖಾಧಿಕಾರಿ ಅತಿಶಯ್ ಜೈನ್ ಸಿಬ್ಬಂದಿಗಳಾದ ಶ್ರೀಮತಿ ವಿಶಾಲ ಹಾಗೂ ನಿರ್ದೇಶಕರಾದ ಹಾಗೂ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಯರಾಜ್ ಜೈನ್‌, ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಶ್ರೀಮತಿ ಗಂಗಾರಾಣಿ ನಾ. ಜೋಶಿ ನಿರ್ದೇಶಕರಾದ ಅಬ್ದುಲ್ ರಜಾಕ್, ಚಂದ್ರಶೇಖರ್, ಪರಮೇಶ್, ನಾಗರಾಜ್‌ ಡಿ, ಶ್ರೀಮತಿ ಹೇಮಲತಾ ಎಂ, ಶ್ರೀಮತಿ, ಹಿಮಪ್ರಭಾ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಶ್ರೀಮತಿ ಆರತಿ ವಂದಿಸಿದರು.

Related posts

ಕಡಿರುದ್ಯಾವರ ದ. ಕ. ಜಿ. ಪಂ ಹಿ. ಪ್ರಾ ಶಾಲೆಯಲ್ಲಿ ಎಸ್.ಡಿ.ಎಮ್.ಸಿ, ಪೋಷಕರ ಸಭೆ ಹಾಗೂ ಶಾಲಾ ಮಕ್ಕಳ ಸಂತೆ ಕಾರ್ಯಕ್ರಮ

Suddi Udaya

ಕಬಡ್ಡಿ ಪಂದ್ಯಾಟ: ಬೆಳಾಲು ಶ್ರೀ.ಧ.ಮಂ. ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ ಪಿ. ಎಲ್. ಡಿ ಬ್ಯಾಂಕಿನ ನಿರ್ದೇಶಕ ಲೋಕಯ್ಯ ಗೌಡ ನಿಧನ

Suddi Udaya

ಕೊಕ್ಕಡ: ಉಪ್ಪಾರಪಳಿಕೆ ವಿ.ಹಿಂ.ಪ. ಭಜರಂಗದಳ ಮತ್ತು ಶ್ರದ್ಧಾ ಗೆಳೆಯರ ಬಳಗದ ವತಿಯಿಂದ ಗೋಪೂಜೆ ಹಾಗೂ ದೋಸೆ ಹಬ್ಬ

Suddi Udaya

ಉಜಿರೆ ಎಸ್.ಡಿ.ಎಂ ನಲ್ಲಿ ಜೀವನ ಕೌಶಲ್ಯ ಹಾಗೂ ವೃತ್ತಿಪರ ಕೌಶಲ್ಯ ಮಾಹಿತಿ ಕಾರ್ಯಾಗಾರ

Suddi Udaya

ಸೂಳಬೆಟ್ಟು ಬರಾಯ ಶ್ರೀಗೋಪಾಲಕೃಷ್ಣ ದೇವರ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ಪೂರ್ವಭಾವಿ ಪ್ರಾರ್ಥನೆ

Suddi Udaya
error: Content is protected !!