April 2, 2025
Uncategorizedಚಿತ್ರ ವರದಿವರದಿ

ಉಜಿರೆ ಗ್ರಾ.ಪಂ. ಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಭೇಟಿ

ಉಜಿರೆ: ಉಜಿರೆ ಗ್ರಾಮ ಪಂಚಾಯತ್ ಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಸರಕಾರದ ಅಧೀನ ಕಾರ್ಯದರ್ಶಿ ಶ್ರೀ ವಿಕಾಸ್, ಶ್ರೀವಾಸ್ತವ್,, ಸೆ.18 ರಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಉಜಿರೆ ಗ್ರಾಮ ಪಂಚಾಯತ್ ತ್ಯಾಜ್ಯ ಸಂಪನ್ಮೂಲ ಘಟಕ, ಪ್ಲಾಸ್ಟಿಕ್ ಮರು ಉತ್ಪಾದನಾ ಘಟಕ ಮತ್ತು ಮಲ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಘಟಕದ ಕಾರ್ಯನಿರ್ವಹಣೆಯ ಕುರಿತು ಪರಿಶೀಲನೆ ನಡೆಸಿದರು.


ಬಳಿಕ, ಉಜಿರೆ ಗ್ರಾಮ ಪಂಚಾಯತ್ ಕಚೇರಿಗೆ ಹಾಗೂ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಕ್ಕೆ ಸಂದರ್ಶಿಸಿ, ಗ್ರಾಮ ಪಂಚಾಯತ್ ನ ಕಾರ್ಯನಿರ್ವಹಣೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಕಿರಣ್ , ಗ್ರಾಮ ಪಂಚಾಯತ್ ಸದಸ್ಯರು, ಮಾನ್ಯ ಕಾರ್ಯನಿರ್ವಹಣಾಧಿಕಾರಿಯಾದ ಕುಸುಮಾಧರ್, AEE ನಿತಿನ್ ಕುಮಾರ್, ಸಹಾಯಕ ಇಂಜಿನಿಯರ್ ಹರ್ಷಿತ್ , ಜಿಲ್ಲಾ ಸಂಯೋಜಕರಾದ ಡೊಂಬಯ್ಯ , ಕಾರ್ಯದರ್ಶಿ ಶ್ರವಣ್ ಕುಮಾರ್ , ಸ್ವಚ್ಛತಾ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಶೀಲಾವತಿ ನಿಧನ

Suddi Udaya

ಷರತ್ತುಗೊಳ್ಳಪಟ್ಟು ಮರು ನೋಂದಣಿ ಮಾಡಿಕೊಳ್ಳಲು ಸಂಘ ಸಂಸ್ಥೆಗಳಿಗೆ ಅವಕಾಶ

Suddi Udaya

ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತೆನೆ ಹಬ್ಬ

Suddi Udaya

ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ: ಕೈಯಿಂದ ಕಾರಿನ ಗಾಜು ಒಡೆದ ವಿವಾದ – ಐವರ‌ ವಿಚಾರಣೆ ಪರಸ್ಪರ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 46 ಮತದಾನ

Suddi Udaya

ನಿಡ್ಲೆ ಗ್ರಾ.ಪಂ. ನಲ್ಲಿ ವಿಕಲಚೇತನರ ಗ್ರಾಮ ಸಭೆ

Suddi Udaya
error: Content is protected !!